ವಿಜಯಸಾಕ್ಷಿ ಸುದ್ದಿ, ಮೈಸೂರು: ಚಿರು ಮೀಡಿಯಾ ಹೌಸ್ ಮೈಸೂರು ಅವರ ‘ಡೆತ್ ಸರ್ಟಿಫಿಕೆಟ್’ ಚಲನಚಿತ್ರ ಪೋಸ್ಟ್ ಪ್ರೊಡಕ್ಷನ್ ಕಾರ್ಯ ಮುಗಿಸಿ ಇದೀಗ ಸೆನ್ಸಾರ್‌ಗೆ ಹೊರಡಲು ಸಿದ್ಧವಾಗಿದೆ.
ಉತ್ತರ ಕರ್ನಾಟಕದ ನೈಜ ಭಾಷೆ, ವಾಸ್ತವಿಕ ಕಥಾಹಂದರ, ಗ್ರಾಮೀಣತೆಯ ಸೊಗಡು, ಮೇಕಪ್ ರಹಿತ ಕಲಾವಿದರು ಮುಂತಾದ ವೈಶಿಷ್ಟ್ಯಗಳಿಂದ ಕೂಡಿರುವ ಈ ಚಿತ್ರದ ಚಿತ್ರೀಕರಣ ಸಂಪೂರ್ಣವಾಗಿ ಬಾಗಲಕೋಟ ಜಿಲ್ಲೆಯ ಹುನಗುಂದ ತಾಲೂಕಿನ ವೀರಾಪುರ, ನಾಗೂರ ಗ್ರಾಮಗಳಲ್ಲದೆ ಇನ್ನಿತರ ಸ್ಥಳಗಳಲ್ಲಿ ಒಂದೇ ಹಂತದಲ್ಲಿ ಚಿತ್ರೀಕರಣ ಮುಕ್ತಾಯಗೊಳಿಸಲಾಗಿದೆ. ಉತ್ತರಕ ರ್ನಾಟಕದ ಜನರ ಬದುಕಿನ ನೈಜತೆಯನ್ನುಇಲ್ಲಿ ಚಿತ್ರೀಕರಿಸಿದ್ದೇನೆ ಎಂದು ನಿರ್ದೇಶಕ ಗುರುದತ್ ಮುಸುರಿ ಹೇಳಿದರು.
ಚಿತ್ರೀಕರಣಕ್ಕೆ ವೀರಾಪೂರ ಮತ್ತು ನಾಗೂರ ಗ್ರಾಮಗಳ ಸಮಸ್ತ ಜನತೆ ಸಂಪೂರ್ಣ ಸಹಕಾರ ನೀಡಿದ್ದಾರೆ. ಅವರಿಗೆ ಎಷ್ಟು ಕೃತಜ್ಞತೆ ಹೇಳಿದರೂ ಕಡಿಮೆಯೇಎಂದು ಕಥೆಗಾರ ಹುನಗುಂದದ ಮಹಾಂತೇಶ ಹಳ್ಳೂರ ಹೇಳಿದರು. ಈಗಾಗಲೇ ಬೆಂಗಳೂರಿನ ತಂಡ ಮೂವ್ಹಿ ಮೇಕರ್ಸ್ ಸ್ಟುಡಿಯೋದಲ್ಲಿ ಸಂಪೂರ್ಣ ಪೋಸ್ಟ್ ಪ್ರೊಡಕ್ಷನ್ ಕಾರ್ಯ ಮುಗಿಸಿದೆ. ನೈಜ ಘಟನೆಯನ್ನು ಕಥೆಯಾಗಿ ಬರೆದ ಮಹಾಂತೇಶ ಹಳ್ಳೂರ ಕಥೆ, ಚಿತ್ರಕಥೆ ಸಂಭಾಷಣೆಯನ್ನು ಬರೆದಿದ್ದಾರೆ. ಛಾಯಾಗ್ರಹಣದ ಜೊತೆ ನಿರ್ದೇಶನದ ಹೊಣೆಯನ್ನು ಗುರುದತ್ತ ಮುಸುರಿ ವಹಿಸಿದ್ದಾರೆ. ಸಂಗೀತ ಅಜಿತ್, ಪತ್ರಿಕಾ ಸಂಪರ್ಕ ಡಾ. ಪ್ರಭು ಗಂಜಿಹಾಳ, ಡಾ. ವೀರೇಶ ಹಂಡಿಗಿ, ಸಹನಿರ್ದೇಶನ ಬಸಲಿಂಗಪ್ಪ ತೋಟದ, ಸಹಾಯಕ ನಿರ್ದೇಶನ ಶೇಷÀಗಿರಿ, ಸಂಕಲನ ಮಲ್ಲಿಕಾರ್ಜುನ, ಪ್ರೊಡಕ್ಷನ್ ಮ್ಯಾನೇಜರ್ ಮಹಾಂತೇಶ ಮಠ, ಸಹ ನಿರ್ಮಾಪಕರಾಗಿ ವಸಂತಾ ಹಳ್ಳೂರ ಕೆಲಸ ಮಾಡಿದ್ದಾರೆ.
ತಾರಾಗಣದಲ್ಲಿ ನಾಯಕ ನಟ ಮನ್ವೀತ್, ವಿಜಯಲಕ್ಷ್ಮೀ, ಮಹಾಂತೇಶ ಹಳ್ಳೂರ, ಬಸಲಿಂಗಪ್ಪ ತೋಟದ, ಜಯದೇವ ಗಂಜಿಹಾಳ, ಪ್ರವೀಣ ಭತ್ತದ, ಬಂಡುಕಟ್ಟಿ, ಡಾ. ಚಂದ್ರನಾಥ ಒಂಟಕುದರಿ, ಮಂಜುಶ್ರೀ ಮಣಿ, ಹನಮಂತ ಮಸ್ಕಿ, ಮಹಾಂತೇಶ ಅಂಗಡಿ, ಮಹಾಂತೇಶ ಮಠ, ಮಹಾಂತೇಶ ಅಗಸಿಮುಂದಿನ, ಮಹಾಂತೇಶ ಅಂಗಡಿ, ನಾಗಪ್ಪ ಪೂಜಾರಿ, ಚಂದ್ರಶೇಖರ ಶಾಸ್ತ್ರಿ, ಸಂಗು ಮಠ, ಬಸನಗೌಡಾ ಹಿರೇಗೌಡ್ರ, ಮಹಾಂತೇಶ ಗಜೇಂದ್ರಗಡ, ವಿನೋದ ಹೂಗಾರ, ಢವಳಚಂದ ಪವಾರ, ಅನಂತ ಬಬಲೇಶ್ವರ, ಗುಡದೂರಕಲ್ಮಠ, ಗುರು ಮಠ, ಭೀಮರಾವ್ ಅಭಿನಯಿಸಿದ್ದಾರೆ.


