ಆಯ್ಕೆ ಮಾಡಿದ ಜನರ ಋಣ ತೀರಿಸುವೆ: ಅಸುಂಡಿ ಗ್ರಾ.ಪಂ ನೂತನ ಅಧ್ಯಕ್ಷ ಅಲ್ತಾಫ್ ಕಾಗದಗಾರ

0
Spread the love

ವಿಜಯಸಾಕ್ಷಿ ಸುದ್ದಿ, ಗದಗ: ಗ್ರಾಮದ ಅಭಿವೃದ್ಧಿ ಬಯಸಿ ನನ್ನ ಮೇಲೆ ವಿಶ್ವಾಸವಿಟ್ಟು ನನ್ನೂರಿನ ಜನ ನನ್ನನ್ನು ಆಯ್ಕೆ ಮಾಡಿದ್ದು, ನಮ್ಮ ಗ್ರಾಮ ಪಂಚಾಯಿತಿಯನ್ನು ಮಾದರಿಯಾಗಿ ಮಾಡುವೆ ಎಂದು ಅಸುಂಡಿ ಗ್ರಾ.ಪಂ ನೂತನ ಅಧ್ಯಕ್ಷ ಅಲ್ತಾಫ್ ಕಾಗದಗಾರ ಹೇಳಿದರು.

Advertisement

ನಾಗಾವಿಯ ಸೋಮೇಶ ಹಿರೇಮಠ ಪ್ರತಿಷ್ಠಾನ ಹಾಗೂ ನಾಗಾವಿ ನಾನಾ ಯೂಟ್ಯೂಬ್ ವತಿಯಿಂದ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ನನ್ನ ಜನಪರ ಕಾರ್ಯಗಳನ್ನು ಮೆಚ್ಚಿಕೊಂಡು ಒಮ್ಮತದಿಂದ ಅಸುಂಡಿ ಗ್ರಾ.ಪಂಗೆ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿದ್ದಾರೆ. ಸೋಮೇಶ ಹಿರೇಮಠ ಪ್ರತಿಷ್ಠಾನದವರು ಉತ್ತಮ ಕಾರ್ಯಕ್ರಮ ಮಾಡುತ್ತಿದ್ದು, ಅವರ ಅಭಿವೃದ್ಧಿ ಪರ ಕಾರ್ಯಗಳಿಗೆ ಕೈಜೋಡಿಸುವೆ ಎಂದು ಹೇಳಿದರು.

ಬಿಜೆಪಿ ಮುಖಂಡ ಮಹೇಶ ದಾಸರ ಮಾತನಾಡಿ, ಜಿಲ್ಲೆಯ ಯುವ ಕಲಾವಿದರಿಗೆ ತಮ್ಮ ಪ್ರತಿಭೆ ತೋರ್ಪಡಿಸಲು ಅವಕಾಶ ನೀಡುವುದಕ್ಕೆ ನಾಗಾವಿಯ ನಾನಾ ಯೂಟ್ಯೂಬ್ ಮುಂದೆ ಬಂದಿದ್ದು, ಯುವ ಕಲಾವಿದರು ಇದನ್ನು ಸದ್ಭಳಕೆ ಮಾಡಿಕೊಳ್ಳಬೇಕು ಎಂದು ಹೇಳಿದು.

ಸಾಹಿತಿ ಹಾಜಿ ಮಾಸ್ತರ ಹರಕುಣಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸೋಮೇಶ ಹಿರೇಮಠ ಪ್ರತಿಷ್ಠಾನದ ಅಧ್ಯಕ್ಷ ಬಸವಣ್ಣೆಯ್ಯ ಹಿರೇಮಠ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭದಲ್ಲಿ ಅಲ್ತಾಫ್ ಕಾಗದಗಾರ್, ಸಾಹಿತಿ, ರಾಗ ಸಂಯೋಜಕ ಹಾಜಿ ಮಾಸ್ಟರ್ ಹಿರೇಹರಕುಣಿ, ಚಿಂಚಲಿಯ ಕವಿಗಳಾದ ರಾಜೇಸಾಬ್ ಕೊಕ್ಕರಗುಂದಿ, ಬೆಳಧಡಿ ಗ್ರಾಮದ ಶ್ರೀದೇವಿ ಆರಾಧಕರಾದ ಶಂಭುಲಿಂಗಯ್ಯ ಕಲ್ಮಠ ಅವರನ್ನು ಸನ್ಮಾನಿಸಿ, ಗೌರವಿಸಲಾಯಿತು.

ಪ್ರವೀಣ್ ಶೆಟ್ಟಿ ಬಣದ ಕರ್ನಾಟಕ ರಕ್ಷಣಾ ವೇದಿಕೆಯ ಜಿಲ್ಲಾಧ್ಯಕ್ಷ ವೆಂಕಟೇಶ ಬೇಲೂರು, ಕಾರ್ಮಿಕ ಘಟಕದ ಅಧ್ಯಕ್ಷ ತಿಮ್ಮಣ್ಣ ಡೋಣಿ, ಕವಿ ರಾಜೇಸಾಬ ಕೊಕ್ಕರಗುಂದಿ, ಮುಖಂಡರಾದ ಮೈಲಾರಪ್ಪ ಕೋಟೆಪ್ಪನವರ್, ಮಂಜು ತಳವಾರ, ಹರೀಶ ಮಾಡಳ್ಳಿ, ಗುರುಸಿದ್ದಪ್ಪ ಮಡಿವಾಳರ, ಶಿವಲಿಂಗವ್ವ ಹಿರೇಮಠ, ಶಾಂತವ್ವ ನಂದಿಕೋಲಮಠ, ಅನಿತಾ ಬೆನಕನಾಳಮಠ, ನಿವೇದಿತಾ ಪಾಟೀಲ,ಮುಂತಾದವರು ಉಪಸ್ಥಿತರಿದ್ದರು. ಧೀರಜ್ ನಂದಿಕೋಲಮಠ ಸ್ವಾಗತಿಸಿ ವಂದಿಸಿದರು.


Spread the love

LEAVE A REPLY

Please enter your comment!
Please enter your name here