ಕಲಬುರಗಿ: ಸಾಲದ ಸುಳಿಗೆ ಸಿಲುಕಿ ಬಿ ಎಸ್ಸಿ ಅಂತಿಮ ವರ್ಷದ ವಿದ್ಯಾರ್ಥಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕಲಬುರಗಿ ನಗರದ ವೀರಶೈವ ಕಲ್ಯಾಣ ಹಾಸ್ಟೆಲ್ ಹಿಂಭಾಗದಲ್ಲಿ ಸ್ಥಳದಲ್ಲಿ ನಡೆದಿದೆ. ಸೋಮನಾಥ್ ಚಿದ್ರಿ (23) ಆತ್ಮಹತ್ಯೆಗೆ ಶರಣಾದ ವಿದ್ಯಾರ್ಥಿಯಾಗಿದ್ದು, ಬೀದರ್ ಜಿಲ್ಲೆಯ ಬಾಲ್ಕಿ ತಾಲ್ಲೂಕಿನ ಡೋಣಗಾಪುರ ನಿವಾಸಿಯಾದ ಸೋಮನಾಥ್,
Advertisement
ಬಿ ಎಸ್ ಸಿ ಅಂತಿಮ ವರ್ಷದಲ್ಲಿ ವ್ಯಸಾಂಗ ಮಾಡುತ್ತಿದ್ದನು. ಆನ್ ಲೈನ್ ಜೂಜಾಟದಿಂದ 80 ಲಕ್ಷ ಹಣ ಕಳೆದುಕೊಂಡಿದ್ದನು. ಇದರಿಂದ ಸಾಲಗಾರರ ಕಾಟ ಹೆಚ್ಚಾಗಿತ್ತು. ಇದರಿಂದ ಬೇಸತ್ತ ವಿದ್ಯಾರ್ಥಿ, ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಇನ್ನೂ ಘಟನೆ ಸಂಬಂಧ ಬ್ರಹ್ಮಪೂರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.