ದಾವಣಗೆರೆ:- ಸಾಲಭಾದೆ ತಾಳಲಾರದೇ ಸಿಆರ್ಪಿಎಫ್ ಯೋಧ ರೈಲಿಗೆ ತಲೆಕೊಟ್ಟು ಸೂಸೈಡ್ ಮಾಡಿಕೊಂಡ ಘಟನೆ ಆಂಧ್ರಪ್ರದೇಶದ ವಿಜಯವಾಡದಲ್ಲಿ ನಡೆದಿದೆ.
34 ವರ್ಷದ ಉಮೇಶ್ ಮೃತ ಯೋಧ. ಕಳೆದ ಒಂದು ತಿಂಗಳ ಹಿಂದೆ ಕೈದಾಳೆ ಗ್ರಾಮಕ್ಕೆ ಉಮೇಶ್ ಆಗಮಿಸಿದ್ದರು. ಮೂರು ದಿನದ ಹಿಂದೆಯಷ್ಟೇ ರಜೆ ಮುಗಿಸಿ ಛತ್ತೀಸ್ಗಢದ 217 ಬೆಟಾಲಿಯನ್ ಕೊಂಟಾದಲ್ಲಿ ಡ್ಯೂಟಿಗೆ ಸೇರಿಕೊಂಡಿದ್ದರು. ಮಾರನೇ ದಿನ ಸಿಆರ್ಪಿಎಫ್ ಯೋಧರು ಉಮೇಶ್ಗಾಗಿ ಎಷ್ಟೇ ಹುಡುಕಾಡಿದರೂ ಆತ ಸಿಕ್ಕಿರಲಿಲ್ಲ. ಬಳಿಕ ವಿಜಯವಾಡದಲ್ಲಿ ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಮಾಹಿತಿ ತಿಳಿದು ಬಂದಿದೆ.



