ವಿಜಯಸಾಕ್ಷಿ ಸುದ್ದಿ, ಗದಗ: ಗದಗ ನಗರದ ಕೆ.ಎಸ್.ಆರ್.ಟಿ.ಸಿ ಡಿಪೋ ಹಿಂದಿನ ಪ್ರದೇಶದ ನಿವಾಸಿ ಶ್ರೀಮತಿ ಸಿದ್ಧಲಿಂಗಮ್ಮ ಪಾಂಡುರಂಗರಡ್ಡಿ ಪುಟ್ಟಪ್ಪನವರ (65) ರವಿವಾರ ಸಂಜೆ ನಿಧನರಾದರು.
ಕುಟುಂಬದವರ ಒಪ್ಪಿಗೆಯ ಮೇರೆಗೆ ಮೃತರ ನೇತ್ರಗಳನ್ನು ದಾನ ಮಾಡಲಾಯಿತು. ಹುಬ್ಬಳ್ಳಿಯ ಎಂ.ಎಂ. ಜೋಷಿ ಆಸ್ಪತ್ರೆಯ ತಜ್ಞ ಸಿಬ್ಬಂದಿ ನಗರಕ್ಕೆ ಆಗಮಿಸಿ ನೇತ್ರದಾನದ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿದರು. ಈ ಸಂದರ್ಭದಲ್ಲಿ ಮಂಜುನಾಥರಡ್ಡಿ ಸೇರಿದಂತೆ ಕುಟುಂಬಸ್ಥರು ಹಾಗೂ ಗದಗ-ಬೆಟಗೇರಿ ಲಯನ್ಸ್ ಕ್ಲಬ್ನ ಪದಾಧಿಕಾರಿಗಳು ಉಪಸ್ಥಿತರಿದ್ದರು ಎಂದು ರಮೇಶ ಶಿಗ್ಲಿ ತಿಳಿಸಿದ್ದಾರೆ.
ಸಾವಿನ ನಂತರ ಕಣ್ಣುಗಳು ಮಣ್ಣಿನಲ್ಲಿ ಮಣ್ಣಾಗದೇ, ಅಗ್ನಿಯಲ್ಲಿ ನಾಶವಾಗದಂತೆ ಮೃತ ವ್ಯಕ್ತಿಯ ಕಣ್ಣುಗಳು ದಾನ ಮಾಡಿದರೆ ಆ ಕಣ್ಣುಗಳು ಕಣ್ಣಿಲ್ಲದ ವ್ಯಕ್ತಿ ಜಗತ್ತನ್ನು ನೋಡಲು ಸಹಾಯಕವಾಗಬಲ್ಲದು. ಲಯನ್ಸ್ ಕ್ಲಬ್ ಕೈಗೊಂಡಿರುವ ಈ ಸಮಾಜಮುಖಿ ಕಾರ್ಯಕ್ಕೆ ಎಲ್ಲರೂ ಕೈಜೋಡಿಸಬೇಕು ಎಂದು ವಿಜಯಕುಮಾರ ಕಳ್ಳಿಗುಡ್ಡ ವಿನಂತಿಸಿದರು.



