ವಿಜಯಸಾಕ್ಷಿ ಸುದ್ದಿ, ಯಲ್ಲಾಪುರ: ನಯನ ಮನೋಹರ, ಸ್ವಚ್ಛ ಸುಂದರ ಮತ್ತು ಹಸಿರು ಪರಿಸರದ ತಪೋವನದಲ್ಲಿ ನಿಂತು ನನಗೆ ತುಂಬಾ ಸಂತೋಷವಾಗುತ್ತಿದೆ. ಇಂತಹ ವಿಶ್ರಾಂತಿ ಧಾಮಗಳು, ರಾಜಯೋಗಿಗಳಿಗೆ ಅವಶ್ಯಕವಾಗಿದ್ದು, ಇಂದು ಅನೇಕ ವರ್ಷಗಳ ನನ್ನ ಕನಸು ಸಾಕಾರವಾಗಿದೆ ಎಂದು ಬ್ರಹ್ಮಾಕುಮಾರಿ ಸಂಸ್ಥೆಯ ವಲಯ ನಿರ್ದೇಶಕರಾದ ಬಸವರಾಜ ರಾಜಋಷಿಗಳು ಸಂತಸ ಹಂಚಿಕೊಟ್ಟರು.
ಉತ್ತರಕನ್ನಡ ಜಿಲ್ಲೆಯ ಯಲ್ಲಾಪುರ ಪಟ್ಟಣದ ಹತ್ತಿರ ಇರುವ ತಪೋವನದಲ್ಲಿ ಯೋಗಿಕ ವಿಶ್ರಾಮಧಾಮದ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಬ್ರಹ್ಮಕುಮಾರಿ ಲೀಲಾ ದಾವಣಗೆರೆ ಸ್ವಾಗತಿಸಿ, ಸದ್ಯ 30 ಕೋಣೆಗಳು ಲಭ್ಯವಿದ್ದು, ಮತ್ತಷ್ಟು ಕೋಣೆಗಳನ್ನು ನಿರ್ಮಿಸುವ ಯೋಜನೆ ಇದೆ ಎಂದು ತಿಳಿಸಿದರು.
ವಲಯ ಸಂಚಾಲಕಿ ಬ್ರಹ್ಮಕುಮಾರಿ ನಿರ್ಮಲ ಹುಬ್ಬಳ್ಳಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಬ್ರಹ್ಮಕುಮಾರಿ ವೀಣಾ ಶಿರಸಿ ಕಾರ್ಯಕ್ರಮ ನಿರೂಪಿಸಿದರು. ರುದ್ರೇಶ್ ಮಲೆಬೆನ್ನೂರ್, ರಾಜಕುಮಾರ್, ಪ್ರಕಾಶ್ ತಂಬದ, ಶ್ರೀಧರ ಹುಬ್ಬಳ್ಳಿ, ಶಿವಾನಂದ್ ತೋಡಕರ ಮುಂತಾದ ಗಣ್ಯರೊಂದಿಗೆ ಸಂಸ್ಥೆಯ ಹಿರಿಯ ಸಂಚಾಲಕರಾದ ಜಯಂತಿ, ಸುಲೋಚನ, ನಿರ್ಮಲ, ಶಕುಂತಲಾ, ವಿಜಯ ಮುಂತಾದವರು ಉಪಸ್ಥಿತರಿದ್ದರು.