HomeKarnataka Newsಸರ್ವರ ಒಳಿತಿಗಾಗಿ ಕಾಂಗ್ರೆಸ್ ಗೆ ಪ್ರತಿರೋಧದ ಸಿದ್ದಾಂತ ಕೊಟ್ಟವರು ದೀನದಯಾಳ್ ಉಪಾಧ್ಯಾಯ: ಬೊಮ್ಮಾಯಿ

ಸರ್ವರ ಒಳಿತಿಗಾಗಿ ಕಾಂಗ್ರೆಸ್ ಗೆ ಪ್ರತಿರೋಧದ ಸಿದ್ದಾಂತ ಕೊಟ್ಟವರು ದೀನದಯಾಳ್ ಉಪಾಧ್ಯಾಯ: ಬೊಮ್ಮಾಯಿ

For Dai;y Updates Join Our whatsapp Group

Spread the love

ಚಿಕ್ಕಮಗಳೂರು: ಪಂಡಿತ ದೀನ್ ದಯಾಳ್ ಉಪಾಧ್ಯಾಯ ಅವರು ಒಬ್ಬ ಮಾನವತಾವಾದಿ, ದೇಶದ 25 ಕೋಟಿ ಜನರನ್ನು ಬಡತನದಿಂದ ಮೇಲೆತ್ತುವ ಮೂಲಕ ಅವರ ಅಂತ್ಯೋದಯದ ವಿಚಾರಗಳನ್ನು ಕಾರ್ಯರೂಪಕ್ಕೆ ತಂದಿರುವ ಶ್ರೇಯಸ್ಸು ಪ್ರಧಾನಿ ನರೇಂದ್ರ ಮೋದಿಯವರಿಗೆ ಸಲ್ಲುತ್ತದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.

ಪಂಡಿತ ದೀನದಯಾಳ್ ಉಪಾಧ್ಯಾಯ ಅವರ ಜನ್ಮದಿನದ ಅಂಗವಾಗಿ ಚಿಕ್ಕಮಗಳೂರು ‌ಜಿಲ್ಲೆ ಕಡೂರು ಮಂಡಲ ಬಿಜೆಪಿ ವತಿಯಿಂದ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಪಾಲ್ಗೊಂಡು, ಪಂಡಿತ ದೀನದಯಾಳ್ ಉಪಾಧ್ಯಾಯ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಮಾತನಾಡಿದರು.ಪಂಡಿತ ದೀನ್ ದಯಾಳ್ ಉಪಾಧ್ಯಾಯ ಅವರು ಒಬ್ಬ ಮಾನವತಾವಾದಿ. ಅವರು ಬಿಜೆಪಿಗೆ ಒಂದು ಸಿದ್ದಾಂತವನ್ನು ವೈಚಾರಿಕತೆಯನ್ನು ಕೊಟ್ಟಿರುವ ಮಹಾನ್ ವ್ಯಕ್ತಿ.

ಏಕಾತ್ಮ ವಿಕಾಸ ಎಂದು ಅವರು ಏನು ಹೇಳಿದ್ದಾರೆ. ಪ್ರತಿಯೊಬ್ಬ ವ್ಯಕ್ತಿಯ ವಿಕಾಸದ ಜೊತೆಗೆ ಸಮಾಜ ಮತ್ತು ದೇಶದ ವಿಕಾಸ ಆಗಬೇಕು. ಸರ್ವೋದಯವನ್ನು ಸಾಧಿಸಲು ಅಂತ್ಯೋದಯ ಅನ್ನುವಂತಹ ಕಲ್ಪನೆ ಕೊಟ್ಟರು. ಸಮಾಜದ ಅಭಿವೃದ್ಧಿ ಅತ್ಯಂತ ಕೆಳಹಂತ ತುಳಿತಕ್ಕೊಳಗಾದ ಜನರನ್ನು ಆರ್ಥಿಕವಾಗಿ, ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಮೇಲೆತ್ತುವ ಮೂಲಕ ಇಡೀ ದೇಶದ ಸಮುದಾಯ, ಸಮಾಜವನ್ನು ಉದ್ದಾರ ಮಾಡಿ ದೇಶಕ್ಕೆ ಭದ್ರ ಬುನಾದಿ ಹಾಕಬೇಕು ಎಂದು ದೀನದಯಾಳ್ ಉಪಾಧ್ಯಾಯ ಅವರು 1950 ರ ದಶಕದಲ್ಲಿ ಬಹಳ ಪ್ರಭಲ ವಾಗಿ ಮಾಡಿದ್ದರು ಎಂದು ಹೇಳಿದರು.

ಕಾಂಗ್ರೆಸ್ ಗೆ ಪ್ರತಿರೋಧ ಸಿದ್ದಾಂತ

ಕಾಂಗ್ರೆಸ್ ಗೆ ಪ್ರತಿರೋಧವಾಗಿರುವ ಸಿದ್ದಾಂತವನ್ನು ಸರ್ವರ ಒಳಿತಿಗಾಗಿ ದೀನದಯಾಳ ಉಪಾಧ್ಯಾಯ ಅವರು ಕೊಟ್ಟಿದ್ದಾರೆ. ಅವರು ಆಕಸ್ಮಿಕವಾಗಿ ನಿಧನ ಹೊಂದಿರುವುದು ಅದು ಇಂದಿಗೂ ಅಗೋಚರವಾಗಿದೆ. ಆದಾಗ್ಯೂ ಕೂಡ ಅವರು ತಮ್ಮ ವಿಚಾರ ಹಾಗೂ ಸಿದ್ದಾಂತದಲ್ಲಿ ಇಂದಿಗೂ ನಮ್ಮ ಮಧ್ಯ ಇದ್ದಾರೆ.

ಬಿಜೆಪಿ ಕೇಂದ್ರದಲ್ಲಿ ಮೂರನೇ ಬಾರಿ ಆಯ್ಕೆಯಾಗಿ ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಸರ್ವ ಜನಾಂಗದ ಅಭಿವೃದ್ದಿಗಾಗಿ 25 ಕೋಟಿ ಜನರನ್ನು ಬಡತನದಿಂದ ಮೇಲೆತ್ತುವ ಮೂಲಕ ದೀನದಯಾಳ್ ಉಪಾಧ್ಯಾಯ ಅವರ ಅಂತ್ಯೋದಯದ ವಿಚಾರಗಳನ್ನು ಕಾರ್ಯರೂಪಕ್ಕೆ ತಂದಿರುವ ಶ್ರೇಯಸ್ಸು ಪ್ರಧಾನಿ ನರೇಂದ್ರ ಮೋದಿಯವರಿಗೆ ಸಲ್ಲುತ್ತದೆ ಎಂದರು.

ನಂಬರ್ ಒನ್ ಭಾರತ

ಪ್ರಧಾನಿ ನರೇಂದ್ರ ಮೋದಿಯವರು ಭಾರತವನ್ನು ಆರ್ಥಿಕ ಮತ್ತು ಸಾಮಾಜಿಕವಾಗಿ ವಿಕಸಿತಗೊಳಿಸಿ ಭಾರತದ ನಾಯಕತ್ವವನ್ನು ವಿಶ್ವದಲ್ಲಿ ಸಾಬೀತು ಮಾಡಿದ್ದಾರೆ. ನಿಮ್ಮೆಲ್ಲರ ಕರ್ತವ್ಯ ಪಕ್ಷದ ಸಂಘಟನೆ ಮಾಡಿ, ನಾವು ಯಾವ ವಿಚಾರ ನಂಬಿದ್ದೇವೆ ಆ ವಿಚಾರಗಳನ್ನು ಜನರಿಗೆ ತಲುಪಿಸಬೇಕು. ದೇಶ ಸೇವೆಯಲ್ಲಿ ತೊಡಗಿಸಿಕೊಂಡು ದೇಶ ಕಟ್ಟುವಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಗೆ ಕೈಜೋಡಿಸಬೇಕು.

ಬರುವಂತಹ ಮುಂದಿನ ಹತ್ತು ವರ್ಷ ಬಹಳ ಮುಖ್ಯ. ಈಗ ಹತ್ತು ವರ್ಷ ಪ್ರಧಾನಿಯವರು ದೇಶಕ್ಕೆ ಭದ್ರ ಬುನಾದಿ ಹಾಕಿದ್ದಾರೆ. 2047 ಕ್ಕೆ ಭಾರತ ವಿಕಸಿತ ಭಾರತ ಆಗಬೇಕಿದೆ. ಈಗ ಭಾರತ ವಿಶ್ವದ ನಾಲ್ಕನೇ ಆರ್ಥಿಕ ಶಕ್ತಿಯಾಗಿದೆ. ಅಮೇರಿಕಾ, ಚೈನಾ, ಜಪಾನ್ ನಂತರ ಭಾರತ ಇದೆ. ಬರುವಂತಹ ಎರಡು ವರ್ಷಗಳಲ್ಲಿ ಭಾರತ ಮೂರನೇ ಸ್ಥಾನಕ್ಕೆ ಬರಲಿದ್ದು, 2047 ಕ್ಕೆ ಭಾರತ ವಿಶ್ವದ ನಂಬರ ದೇಶ ಆಗಬೇಕು ಎನ್ನುವಂತದ್ದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಯವರ ಕನಸು ಮತ್ತು ಎಲ್ಲ ಭಾರತಿಯರ ಕನಸಾಗಿದೆ.

ಅದನ್ನು ನನಸು ಮಾಡಲು ಎಲ್ಲದಕ್ಕೂ ಮೂಲ ಪ್ರೇರಣೆ ಪಂಡಿತ್ ದೀನದಯಾಳ್ ಉಪಾಧ್ಯಾಯ ಅವರು, ದೀನದಯಾಳ ಉಪಾಧ್ಯಾಯ ಅವರು ಹೇಳಿರುವುದು ಏಕಾತ್ಮ ವಿಕಾಸ ಮತ್ತು ಅಂತ್ಯೋದಯ. ಇವುಗಳನ್ನು ಮುಂದೆ ತೆಗೆದುಕೊಂಡು ಹೋಗಬೇಕಿದೆ. ಅದರ ಮುಖಾಂತರ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಕಾರ್ಯಕ್ರಮಗಳಿಗೆ ಬೆಂಬಲಿಸಿ ಭಾರತವನ್ನು ಶ್ರೇಷ್ಠ ಭಾರತ ಮಾಡುವ ಸಂಕಲ್ಪ ಮಾಡೋಣ ಎಂದು ಹೇಳಿದರು.


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!