ಮುದ್ದಾದ ಹೆಣ್ಣು ಮಗುವಿಗೆ ಜನ್ಮ ನೀಡಿದ ದೀಪಿಕಾ ಪಡುಕೋಣೆ!

0
Spread the love

ಬಾಲಿವುಡ್​ನ ನಟಿ ದೀಪಿಕಾ ಪಡುಕೋಣೆ ಇಂದು ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಅವರು ನಿನ್ನೆ ಸಂಜೆ ಮುಂಬೈನ ರಿಲಯನ್ಸ್​ ಫೌಂಡೇಶನ್​ನ ಆಸ್ಪತ್ರೆಗೆ ದಾಖಲಾಗಿದ್ದರು. ರಣ್​ವೀರ್ ಸಿಂಗ್-ದೀಪಿಕಾ 2018 ರಲ್ಲಿ ವಿವಾಹವಾಗಿದ್ದರು. ಇದೀಗ ಮೊದಲ ಬಾರಿಗೆ ಪೋಷಕರಾಗಿದ್ದಾರೆ.

Advertisement

ಗೌರಿ ಗಣೇಶ ಹಬ್ಬದ ಸಂಭ್ರಮದ ನಡುವೆ ನಟಿ ದೀಪಿಕಾ ಹೆಣ್ಣ ಮಗುವಿಗೆ ಜನ್ಮ ನೀಡಿರುವುದು ಕುಟುಂಬದಲ್ಲಿ ಸಂತಸ ಮೂಡಿಸಿದೆ. ಮಗು ಮತ್ತು ದೀಪಿಕಾ ಇಬ್ಬರೂ ಆರೋಗ್ಯವಾಗಿದ್ದಾರೆ. ಸೆ.7ರಂದು ಸಂಜೆ ರಿಲಯನ್ಸ್‌ ಫೌಂಡೇಶನ್‌ ಆಸ್ಪತ್ರೆಗೆ ದಾಖಲಾಗಿದ್ದರು.

ಇದೀಗ ಮನೆಗೆ ಪುಟ್ಟ ಗೌರಿಯ ಆಗಮನವಾಗಿದೆ. ಇನ್ನೂ ದೀಪಿಕಾ ಮತ್ತು ರಣ್‌ವೀರ್‌ ದಂಪತಿ ಫ್ಯಾನ್ಸ್‌, ಸ್ಟಾರ್ಸ್‌ ಶುಭಹಾರೈಸುತ್ತಿದ್ದಾರೆ. ಇತ್ತೀಚೆಗೆ ನಟಿ ಮಸ್ತ್ ಆಗಿ ಬೇಬಿ ಬಂಪ್ ಫೋಟೋಶೂಟ್ ಮಾಡಿಸಿದ್ದರು. ಪ್ರೆಗ್ನೆನ್ಸಿ ಮ್ಯಾಟರ್ ಸುಳ್ಳು ಎಂದವರಿಗೆ ಬಂಪ್ ತೋರಿಸಿ ಪತಿ ಜೊತೆ ಕ್ಯಾಮೆರಾಗೆ ದೀಪಿಕಾ ಪೋಸ್ ನೀಡಿದ್ದರು.


Spread the love

LEAVE A REPLY

Please enter your comment!
Please enter your name here