ವಿಜಯಸಾಕ್ಷಿ ಸುದ್ದಿ, ಗದಗ: ನಗರದ ಕಿಟ್ಲಿ ಓಣಿಯ ಶ್ರೀ ಜೋಡ ಹನಮಂತ ದೇವಸ್ಥಾನದಲ್ಲಿ ಕಾರ್ತಿಕ ದೀಪೋತ್ಸವ ವಿಜೃಂಭಣೆಯ ಇಂದ ಜರುಗಿತು. ಬೆಳಿಗ್ಗೆ ಮಾರುತಿ ದೇವರಿಗೆ ಅಭಿಷೇಕ, ವಿಶೇಷ ಅಲಂಕಾರ ನೆರವೇರಿಸಲಾಯಿತು. ಸಾಯಂಕಾಲ ದೇವಸ್ಥಾನಕ್ಕೆ ಹೂವಿನ ಅಲಂಕಾರ, ವಿದ್ಯುತ್ ದೀಪಾಲಂಕಾರಗಳೊಡನೆ ಹಿರಿಯರಾದ ಪ್ರಮೋದ ವಿ. ರಾಯ್ಕರ್ ಅವರು ದೀಪ ಬೆಳಗುವುದರ ಮೂಲಕ ದೀಪೋತ್ಸವಕ್ಕೆ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಟ್ರಸ್ಟಿಗಳಾದ ರಾಮಣ್ಣ ಬಾಕಳೆ, ಆನಂದ ಸರ್ವದೆ, ನಿರಂಜನ ಓಝಾ, ಅಂಬಾಲಾಲ ಖೋಡೆ, ಬಸವರಾಜ ಪೂಜಾರ, ಓಣಿಯ ಹಿರಿಯರಾದ ಅರ್ಜುನಸಾ ಬದಿ, ವಿಜಯಣ್ಣ ಚಿಕ್ಕೊಪ್ಪ, ಸುಧೀರ ಕಾಟೀಗರ, ಮಹಾಂತಯ್ಯ ಕನಕಾರಿಮಠ, ಮಾರುತಿ ವೈ. ತೇರದಾಳ, ಮನೋಹರ ದಲಬಂಜನ, ಸುನೀಲ ಬಸವಾ, ಸತೀಶ ಮಾನ್ವಿ, ರಾಜು ಮಗಜಿ ಸೇರಿದಂತೆ ಅಪಾರ ಸದ್ಭಕ್ತರು ದೀಪೋತ್ಸವದಲ್ಲಿ ಪಾಲ್ಗೊಂಡು ಪ್ರಸಾದ ಸ್ವೀಕರಿಸಿದರು.



