ವಿಜಯಸಾಕ್ಷಿ ಸುದ್ದಿ, ಗದಗ: ತಾಲೂಕಿನ ಸುಕ್ಷೇತ್ರ ಬಳಗಾನೂರು ಗ್ರಾಮದಲ್ಲಿ ಘನಮೌನಿ, ತ್ರಿಕಾಲಜ್ಞಾನಿ, ಮೌನತೌಪಸ್ವಿ ಚಿಕೇನಕೊಪ್ಪದ ಶ್ರೀಚನ್ನವೀರ ಶರಣರ ಶ್ರೀಮಠದಲ್ಲಿರುವ ಕರ್ತೃ ಗದ್ದುಗೆಗೆ ಕಾರ್ತಿಕ ಮಾಸದ ಅಂಗವಾಗಿ ಡಿಸೆಂಬರ್ 4ರಂದು ಸಂಜೆ 6.30 ಗಂಟೆಗೆ ಪೂಜ್ಯರ ಅಮೃತ ಹಸ್ತದಿಂದ ದೀಪೋತ್ಸವ, 547ನೇ ಮಾಸಿಕ ಶಿವಾನುಭವಗೋಷ್ಠಿ ಮತ್ತು ಸಂಗೀತ ಸುಧೆ ಕಾರ್ಯಕ್ರಮ ಜರಗಲಿದೆ.
ಕಾರ್ಯಕ್ರಮದಲ್ಲಿ ಹೊಸಳ್ಳಿಯ ಬೂದೀಶ್ವರ ಶ್ರೀಮಠದ ಪೂಜ್ಯಶ್ರೀ ಜ. ಅಭಿನವ ಬೂದೀಶ್ವರ ಮಹಾಸ್ವಾಮಿಗಳು ದಿವ್ಯ ಸಾನ್ನಿಧ್ಯ ವಹಿಸುವರು. ಬಳಗಾನೂರು ಶ್ರೀಮಠದ ಪೂಜ್ಯಶ್ರೀ ಶಿವಶಾಂತವೀರ ಶರಣರು ಅಧ್ಯಕ್ಷತೆ ವಹಿಸುವರು.
ಶಿವಾನುಭವದಲ್ಲಿ ಶಿವಲಿಂಗ ಶಾಸ್ತ್ರಿಗಳು ಸಿದ್ದಾಪೂರ ಇವರಿಂದ ಪ್ರವಚನ ಜರುಗುವದು. ಎಚ್.ಎಸ್. ವೆಂಕಟಾಪೂರ ಗ್ರಾಮದ ಕುಮಾರಸ್ವಾಮಿ ಹಿರೇಮಠ ಅವರಿಂದ ಸಂಗೀತ ಸುಧೆ ಕಾರ್ಯಕ್ರಮ ಜರುಗಲಿದ್ದು, ಇವರಿಗೆ ಕಲಬುರಗಿಯ ಶಶಿಕುಮಾರ ಅವರು ತಬಲಾ ಸಾಥ್ ನೀಡುವರು ಎಂದು ಶ್ರೀಮಠದ ಪ್ರಕಟಣೆ ತಿಳಿಸಿದೆ.


