ವಿಜಯಸಾಕ್ಷಿ ಸುದ್ದಿ, ನರೇಗಲ್ಲ: ಹನುಮಾನ ಚಾಲೀಸಾ ಪಠಣದಿಂದ ಮನಸ್ಸಿಗೆ ಶಾಂತಿ ದೊರಕುತ್ತದೆ. ನಿತ್ಯವೂ ಈ ಪಾಠವನ್ನು ಪಠಣೆ ಮಾಡುವುದರಿಂದ ಮನಸ್ಸಿನಲ್ಲಿನ ಭಯ ಇತ್ಯಾದಿಗಳು ದೂರವಾಗುತ್ತವೆ. ಆದ್ದರಿಂದ ದಿನಕ್ಕೆ ಒಮ್ಮೆಯಾದರೂ ಮನೆಯಲ್ಲಿ ಹನುಮಾನ ಚಾಲೀಸಾ ಪಠಣೆ ಮಾಡಬೇಕೆಂದು ಎ.ಜಿ. ಕುಲಕರ್ಣಿ ಹೇಳಿದರು.
ಪಟ್ಟಣದ ಜಕ್ಕಲಿ ಕ್ರಾಸ್‌ನಲ್ಲಿರುವ ಶ್ರೀ ಮಾರುತಿ ಮಂದಿರದಲ್ಲಿ ನರೇಗಲ್ಲ ಬ್ರಹ್ಮ ಸಮಾಜದಿಂದ ಆಚರಿಸಲಾದ ಹನುಮಾನ ಚಾಲೀಸಾ ಪಠಣೆಯ ನಂತರ ಅವರು ಮಾತನಾಡಿದರು.
ಹನುಮಂತ ಶಕ್ತಿ, ಯುಕ್ತಿಗೆ ಹೆಸರಾದ ದೇವರು. ನಂಬಿದವರನ್ನು ಹೇಗೆ ಪೊರೆಯಬೇಕು ಎಂಬುದನ್ನು ಅವನ ಚರಿತ್ರೆಯಿಂದ ನಾವು ತಿಳಿಯಬಹುದು. ಇಂತಹ ಸ್ವಾಮಿ ನಿಷ್ಠೆಯುಳ್ಳ ಹನುಮಂತನ ಪಠಣೆ ಮಾಡುವುದರಿಂದ ಸರ್ವ ದೋಷಗಳೂ ನಿವಾರಣೆಯಾಗುತ್ತವೆ ಎಂದು ಕುಲಕರ್ಣಿ ಹೇಳಿದರು.
ಶ್ರೀ ದತ್ತಭಕ್ತ ಮಂಡಳಿಯ ಅಧ್ಯಕ್ಷ ಡಾ. ನಾಗರಾಜ ಗ್ರಾಮಪುರೋಹಿತ ಮಾತನಾಡಿ, ಹನುಮಾನ ಚಾಲೀಸಾ ಪಠಣೆಯ ಸವಿರುಚಿಯನ್ನು ನಮಗೆ ಹತ್ತಿಸಿದವರು ಶ್ರೀಕ್ಷೇತ್ರ ಹೆಬ್ಬಳ್ಳಿಯ ಪರಮಪೂಜ್ಯ ಶ್ರೀ ದತ್ತಾವಧೂತ ಗುರುಗಳು. ನರೇಗಲ್ಲನ್ನೊಳಗೊಂಡಂತೆ ನಾಡಿನ ಹಲವಾರು ಕಡೆಗಳಲ್ಲಿ ಅವರು ಭಕ್ತರಿಂದ ಹನುಮಾನ ಚಾಲೀಸಾ ಹೇಳಿಸುತ್ತಿದ್ದಾರೆ. ನವೆಂಬರ್‌ನಲ್ಲಿ ಅವರು ಹುಬ್ಬಳ್ಳಿಯಲ್ಲಿ 100 ತಾಸುಗಳ ಹನುಮಾನ ಚಾಲೀಸಾ ಪಠಣೆಯನ್ನು ಇರಿಸಿಕೊಂಡಿದ್ದಾರೆ. ಅವರ ಅಣತಿಯಂತೆ ನರೇಗಲ್ಲದ ಸದ್ಭಕ್ತರು ಅಲ್ಲಿಗೆ ತೆರಳಿ, ಹನುಮಾನ ಚಾಲೀಸಾ ಪಠಣೆಯಲ್ಲಿ ಪಾಲ್ಗೊಳ್ಳುವ ಯೋಜನೆಯನ್ನು ಹಾಕಿಕೊಂಡಿದ್ದೇವೆ ಎಂದರು.
ಈ ಸಂದರ್ಭದಲ್ಲಿ ಎಸ್.ಎಚ್. ಕುಲಕರ್ಣಿ, ಆನಂದ ಕುಲಕರ್ಣಿ, ಪ್ರಶಾಂತ ಗ್ರಾಮಪುರೋಹಿತ, ಆನಂದ ಕಾಳೆ, ರಂಗಣ್ಣ ಕುಲಕರ್ಣಿ, ಎ.ಎ. ಕುಲಕರ್ಣಿ, ನಾಗೇಶ ಗ್ರಾಮಪುರೋಹಿತ, ನಾಗರಾಜ ನಾಡಿಗೇರ, ಆದರ್ಶ ಕುಲಕರ್ಣಿ, ಅರುಣ ಗ್ರಾಮಪುರೋಹಿತ, ಬಾಬು ಕಾಳೆ, ಪರಿಮಳಾ ಗ್ರಾಮಪುರೋಹಿತ, ಪದ್ಮಾ ಕುಲಕರ್ಣಿ, ಅರ್ಚನಾ ಕುಲಕರ್ಣಿ, ರೇಣುಕಾ ಗ್ರಾಮಪುರೋಹಿತ, ಭಾಗ್ಯಾಬಾಯಿ ಕಾಳೆ, ರೂಪಾ ಕುಲಕರ್ಣಿ, ಪ್ರತಿಕ್ಷಾ ಕುಲಕರ್ಣಿ, ಭಾರತಿಬಾಯಿ ಗ್ರಾಮಪುರೋಹಿತ, ನಿಖಿತಾ ಗ್ರಾಮಪುರೋಹಿತ, ಲಕ್ಷ್ಮೀ ಗ್ರಾಮಪುರೋಹಿತ, ಸನ್ಮತಿ ಸದರಜೋಷಿ, ಅನಿತಾ ಗ್ರಾಮಪುರೋಹಿತ, ಜ್ಯೋತಿ ನಾಡಿಗೇರ, ಜಯಶ್ರೀ ಗ್ರಾಮಪುರೋಹಿತ, ಶೋಭಾ ಸೂರಭಟ್ಟನವರ, ಪಲ್ಲವಿ ಗ್ರಾಮಪುರೋಹಿತ, ಅನುಪಮಾ ಗ್ರಾಮಪುರೋಹಿತ ಮುಂತಾದವರಿದ್ದರು.


