ವಿಜಯಸಾಕ್ಷಿ ಸುದ್ದಿ, ಗದಗ: ಸ್ವಾರ್ಥಕ್ಕಾಗಿ ತಮ್ಮ ಕುರ್ಚಿ ಉಳಿಸಿಕೊಳ್ಳಲು ಕಾಂಗ್ರೆಸ್ ಸರ್ಕಾರ ಸಂವಿಧಾನದಲ್ಲಿ ಹಲವಾರು ತಿದ್ದುಪಡಿಗಳನ್ನು ಮಾಡಿದೆಯೇ ಹೊರತು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣಕ್ಕಾಗಿ ಏನೂ ಮಾಡಲಿಲ್ಲ ಎಂದು ರಾಜ್ಯ ಎಸ್.ಸಿ. ಮೋರ್ಚಾದ ಪ್ರಧಾನ ಕಾರ್ಯದರ್ಶಿ ಹಾಗೂ ಸಂವಿಧಾನ ಸನ್ಮಾನ ಅಭಿಯಾನದ ರಾಜ್ಯ ಸಂಯೋಜಕರಾದ ಮಹೇಂದ್ರ ಕೌತಾಳ ಹೇಳಿದರು.
ವಿಧಾನ ಪರಿಷತ್ ಸದಸ್ಯರಾದ ಎಸ್.ವಿ. ಸಂಕನೂರ ಅವರ ನಿವಾಸದಲ್ಲಿ ಏರ್ಪಡಿಸಿದ್ದ ಸಂವಿಧಾನ ಸನ್ಮಾನ ಹಾಗೂ ಭೀಮ ಸಂಗಮ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಅವರು ಮಾತನಾಡಿದರು.
ನಿವೃತ್ತ ಪ್ರಾಚಾರ್ಯರಾದ ಕೆ.ಎಚ್. ಬೆಲೂರ ಮಾತನಾಡಿ, ಡಾ. ಬಾಬಾ ಸಾಹೇಬ ಅಂಬೇಡ್ಕರವರು ನಡೆದು ಬಂದ ದಾರಿ ಹಾಗೂ ದೇಶಕ್ಕೆ ಕೊಟ್ಟ ಕೊಡುಗೆಯ ಕುರಿತು ವಿವರಿಸಿದರು. ಮೋಹನ ಅಲ್ಮೇಲ್ಕರ, ಉಷಾ ದಾಸರ, ರಾಜು ಕುರಡಗಿ ಮಾತನಾಡಿದರು. ಕಾರ್ಯಕ್ರಮದಲ್ಲಿ 26 ಪುರಷ ಹಾಗೂ 30 ಮಹಿಳಾ ಸಾಧಕರನ್ನು ಸನ್ಮಾನಿಸಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಎಮ್.ಎಸ್. ಕರಿಗೌಡರ, ಮೋಹನ ಮಾಳಶೆಟ್ಟಿ, ವಿಜಯಕುಮಾರ ಗಡ್ಡಿ, ನಾಗರಾಜ ತಳವಾರ, ಭೀಮಸಿಂಗ್ ರಾಥೋಡ, ನಾಗರತ್ನ ಮುಳಗುಂದ, ಲಕ್ಷö್ಮಣ ದೊಡ್ಡಮನಿ, ಮಂಜುನಾಥ ತಳವಾರ, ಭೀಮವ್ವ ಬೇವಿನಕಟ್ಟಿ, ಜಗನ್ನಾಥಸಾ ಭಾಂಡಗೆ, ತೋಟಸಾ ಭಾಂಡಗೆ, ಡಿ.ಎಚ್. ಲದ್ವಾ, ಸಿದ್ದು ಪಲ್ಲೇದ, ಮಹೇಶ ದಾಸರ, ಅನಿಲ ಅಬ್ಬಿಗೇರಿ, ರಾಘವೇಂದ್ರ ಯಳವತ್ತಿ, ಮುತ್ತು ಮುಶಿಗೇರಿ, ಪ್ರಶಾಂತ ನಾಯ್ಕರ, ವಾಯ್.ಪಿ. ಅಡ್ನೂರ, ಪ್ರಕಾಶ ಅಂಗಡಿ, ಅಶೋಕ ಕರೂರ, ಹನಮಂತಪ್ಪ ದಿಂಡೇನರ, ಬೂದಪ್ಪ ಹಳ್ಳಿ, ಲಿಂಗರಾಜ ಪಾಟೀಲ, ಸಂತೋಷ ಅಕ್ಕಿ, ಶಶಿಧರ ದಿಂಡೂರ, ಟಿ.ಡಿ. ಲಮಾಣಿ, ಮಾಯಪ್ಪ ಭಜಂತ್ರಿ ಉಪಸ್ಥಿತರಿದ್ದರು.
ನಾಗರಾಜ ಕುಲಕರ್ಣಿ ಪ್ರಾರ್ಥನೆ ಮಾಡಿದರು. ಎಸ್.ಸಿ. ಮೋರ್ಚಾ ಜಿಲ್ಲಾ ಅಧ್ಯಕ್ಷ ಮಂಜುನಾಥ ಮುಳಗುಂದ ಕಾರ್ಯಕ್ರಮ ನಿರೂಪಿಸಿದರು. ಈಶ್ವರಪ್ಪ ರಂಗಪ್ಪನವರ ವಂದಿಸಿದರು. ರಮೇಶ ಸಜ್ಜಗಾರ ಪ್ರತಿಜ್ಞಾ ವಿಧಿಯನ್ನು ಬೋಧಿಸಿದರು.
ವಿಧಾನ ಪರಿಷತ್ ಸದಸ್ಯ ಎಸ್.ವಿ. ಸಂಕನೂರ ಮಾತನಾಡಿ, ಸಮಾನತೆ ಹಾಗೂ ಸಾಮಾಜಿಕ ನ್ಯಾಯ ಸಾರುವ ಸಂವಿಧಾನ ರಚನೆ ಮಾಡಿದ ಡಾ. ಬಿ.ಆರ್. ಅಂಬೇಡ್ಕರ ಅವರಿಗೆ ಗೌರವ ಸಲ್ಲಿಸುವ ಹಿನ್ನೆಲೆಯಲ್ಲಿ ಭೀಮ ಸಂಗಮ ಹಾಗೂ ಸಹ ಭೋಜನ ಔತಣಕೂಟ ಏರ್ಪಡಿಸಲಾಗಿದೆ. ಕಾಂಗ್ರೆಸ್‌ನವರು ಬಿಜೆಪಿ ಸರ್ಕಾರ ಸಂವಿಧಾನವನ್ನು ಬದಲಾವಣೆ ಮಾಡುತ್ತಾರೆ ಎಂದು ಸುಳ್ಳು ಹೇಳುತ್ತಿರುವುದು ಸತ್ಯಕ್ಕೆ ದೂರವಾದದ್ದು ಎಂದರು.