ಬೆಂಗಳೂರು: ಮೂವತ್ತು ಸಾವಿರ ಲಂಚಕ್ಕೆ ಬೇಡಿಕೆಯಿಟ್ಟಿದ್ದ ಪೊಲೀಸ್ ಪೇದೆ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ಬಂಡೆಪಾಳ್ಯ ಪೊಲೀಸ್ ಪೇದೆ ಸತೀಶ್ ರೆಡ್ ಹ್ಯಾಂಡ್ ಆಗಿ ಲೋಕಾಯುಕ್ತ ಬಲೆಗೆ ಸಿಕ್ಕಿಬಿದ್ದಾರೆ. ಗ್ಯಾಸ್ ಏಜೆನ್ಸಿಯವರಿಂದ ಮೂವತ್ತು ಸಾವಿರ ಹಣ ಡಿಮ್ಯಾಂಡ್ ಮಾಡಿದ್ದರು.
Advertisement
ಈ ಬಗ್ಗೆ ಲೋಕಾಯುಕ್ತ ಅಧಿಕಾರಿಗಳಿಗೆ ಗ್ಯಾಸ್ ಏಜೆನ್ಸಿ ಸಿಬ್ಬಂದಿ ದೂರು ನೀಡಿದ್ದರು. ಬಂಡೆಪಾಳ್ಯ ಠಾಣೆ ಹೊರಭಾಗದಲ್ಲಿ ಲಂಚ ಸ್ವೀಕರಿಸೋ ವೇಳೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ. ಸದ್ಯ ಘಟನೆ ಸಂಬಂಧ ಬಂಡೆಪಾಳ್ಯ ಇನ್ಸ್ ಪೆಕ್ಟರ್ ಮಹೇಶ್ ರಿಂದ ವರದಿ ಕೇಳಿ ತನಿಖೆ ಮುಂದುವರೆಸಿದ್ದಾರೆ.