ಹಾವೇರಿ:- 2 ಸಾವಿರ ಲಂಚ ಪಡೆಯುವ ವೇಳೆ ಉಪತಹಸೀಲ್ದಾರ್ ಸೇರಿ ಕಂಪ್ಯೂಟರ್ ಆಪರೇಟರ್ ಸಿಬ್ಬಂದಿ ಲೋಕಾ ಅಧಿಕಾರಿಗಳ ಬಲೆಗೆ ಬಿದ್ದಿರುವ ಘಟನೆ ಜರುಗಿದೆ.
Advertisement
ಉಪತಹಸೀಲ್ದಾರ್ ನಾಗರಾಜ್ ಆರ್ ಸೂರ್ಯವಂಶಿ ಹಾಗೂ ಕಂಪ್ಯೂಟರ್ ಆಪರೇಟರ್ ಕಿರಣ್ ಲೋಕಾ ಬಲೆಗೆ ಬಿದ್ದವರು. ಹಾನಗಲ್ ತಾಲೂಕಿನ ಬಮ್ಮನಹಳ್ಳಿ ನಾಡಕಚೇರಿ ಮೇಲೆ ಲೋಕಾ ಡಿವೈಎಸ್ ಪಿ ಮಧುಸೂದನ್ ನೇತೃತ್ವದಲ್ಲಿ ನಡೆದ ದಾಳಿ ವೇಳೆ ಇಬ್ಬರು ಲಾಕ್ ಆಗಿದ್ದಾರೆ. ವಂಶವೃಕ್ಷ ಪೂರೈಸಲು ಗಂಗಾಧರ ಯಳವಟ್ಟಿ ಎಂಬುವವರ ಬಳಿ 15 ಸಾವಿರಕ್ಕೆ ಉಪತಹಶಿಲ್ದಾರ್ ಲಂಚಕ್ಕೆ ಬೇಡಿಕೆ ಇಟ್ಟಿದ್ದರು.
ಅದರಂತೆ ಮುಂಗಡವಾಗಿ 2 ಸಾವಿರ ರೂಪಾಯಿ ಸ್ವೀಕರಿಸುವಾಗ ಲೋಕಾ ಬಲೆಗೆ ಬಿದ್ದಿದ್ದಾರೆ. ಸದ್ಯ ಇಬ್ಬರನ್ನ ಬಂಧಿಸಿರುವ ಲೋಕಾ ಅಧಿಕಾರಿಗಳು, ವಿಚಾರಣೆ ಕೈಗೊಂಡಿದ್ದಾರೆ.


