ಹುಬ್ಬಳ್ಳಿ: ವಾರಸಾ ಪ್ರಮಾಣಪತ್ರ ನೀಡಲು ಲಂಚಕ್ಕೆ ಬೇಡಿಕೆ ಇಟ್ಟಿದ್ದ ಗ್ರಾಮ ಸಹಾಯಕನೋರ್ವ ಲೋಕಾ ಅಧಿಕಾರಿಗಳ ಬಲೆಗೆ ಬಿದ್ದಿದ್ದಾರೆ.
ಭಾಷಾ ಹಟೇಲ್‌ಸಾಬ್ ಶೇಖಸನದಿ ಬಂಧಿತ ಗ್ರಾಮ ಸಹಾಯಕ. ಇವರು ವ್ಯಕ್ತಿಯೊಬ್ಬರಿಗೆ ವಾರಸಾ
ಪ್ರಮಾಣಪತ್ರ ನೀಡಲು ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಇದರ ದೂರು ಆಧರಿಸಿ ನಗರದ ಬಮ್ಮಾಪುರ ಓಣಿಯಲ್ಲಿ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿ ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ.
ನಗರದ ಪ್ರಮೋದ ಅಗಳಿ ಎಂಬುವರು ವಾರಸಾ ಪ್ರಮಾಣಪತ್ರ ಪಡೆಯಲು ಹೋದಾಗ ಗ್ರಾಮ ಸಹಾಯಕ ಭಾಷಾ ಹಟೇಲ್‌ಸಾಬ್ ₹3,500 ಲಂಚಕ್ಕೆ ಬೇಡಿಕೆ ಇಟ್ಟಿದ್ದ. ಕಚೇರಿ ಹತ್ತಿರವಿದ್ದ ಔಷಧ ಅಂಗಡಿಯಲ್ಲಿ ಹಣ ನೀಡುವಂತೆ ಹೇಳಿದ್ದ. ಆಗ ಲೋಕಾಯುಕ್ತ ಅಧಿಕಾರಿಗಳ ತಂಡ ದಾಳಿ ನಡೆಸಿ ವಶಕ್ಕೆ ಪಡೆದಿದ್ದು, ತನಿಖೆ ಕೈಗೊಂಡಿದ್ದಾರೆ.



