ವಿಜಯಸಾಕ್ಷಿ ಸುದ್ದಿ, ಲಕ್ಮೇಶ್ವರ: ಪಟ್ಟಣದ ಕೌಡೇಶ್ವರ ನಗರದ ನಿವಾಸಿಗಳು ಮೂಲಭೂತ ಸೌಲಭ್ಯಕ್ಕೆ ಆಗ್ರಹಿಸಿ ಸೋಮವಾರ ಪುರಸಭೆಗೆ ತೆರಳಿ, ಅಧ್ಯಕ್ಷೆ ಯಲ್ಲವ್ವ ದುರಗಣ್ಣವರ ಹಾಗೂ ಮುಖ್ಯಾಧಿಕಾರಿ ಮಹೇಶ ಹಡಪದ ಅವರಿಗೆ ಮನವಿ ಸಲ್ಲಿಸಿದರು.
ಈ ವೇಳೆ ಮಾತನಾಡಿದ ಕೌಡೇಶ್ವರ ನಗರದ ಸಾರ್ವಜನಿಕರು, ಪುರಸಭೆ ವ್ಯಾಪ್ತಿಯ ವಾರ್ಡ್ ನಂ-8ರಲ್ಲಿ ಬರುವ ಕೌಡೇಶ್ವರ ನಗರದ ನಿವಾಸಿಗಳು ಕಳೆದ 15 ವರ್ಷಗಳಿಂದ ಮೂಲಭೂತ ಸೌಲಭ್ಯಗಳಿಲ್ಲದೇ ಹತ್ತಾರು ಸಮಸ್ಯೆಗಳಿಂದ ನರಕಯಾತನೆ ಅನುಭವಿಸುತ್ತಿದ್ದೇವೆ. ತಪ್ಪದೇ ಮನೆ ತೆರಿಗೆ, ನೀರಿನ ಬಿಲ್ ತುಂಬುತ್ತಾ ಬಂದಿದ್ದೇವೆ. ಆದರೆ ಸ್ವಚ್ಛತೆ, ಚರಂಡಿ, ರಸ್ತೆ, ನೀರು ಸೇರಿದಂತೆ ಅಗತ್ಯ ಸೌಲಭ್ಯದಿಂದ ವಂತಚಿತರಾಗಿದ್ದೇವೆ. ಮಳೆ ಬಂದರೆ ಮನೆಗಳಿಗೆ ನೀರು ನುಗ್ಗುತ್ತದೆ. ರಸ್ತೆ ಮಧ್ಯದಲ್ಲಿ ನೀರು ಹರಿದು ಸದಾ ಕೆಸರಿನಿಂದ ಕೂಡಿರುತ್ತದೆ. ಈ ಬಗ್ಗೆ ಅನೇಕ ಬಾರಿ ಪುರಸಭೆ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಕೂಡಲೇ ಅಧಿಕಾರಿಗಳು ಸ್ಥಳಕ್ಕೆ ಬಂದು ಸಮಸ್ಯೆ ಬಗೆಹರಿಸದಿದ್ದರೆ ಪುರಸಭೆಯ ಎದುರು ಅಹೋರಾತ್ರಿ ಧರಣಿ ನಡೆಸುತ್ತೇವೆ ಎಂದು ಎಚ್ಚರಿಕೆ ನೀಡಿದರು.
ಈ ವೇಳೆ ರಾಘುಸ್ವಾಮಿ ಬನ್ನಿ, ನೀಲಪ್ಪಗೌಡ ಹೊಸಗೌಡ್ರ, ಶೇಖಪ್ಪ ಕೋರಿ, ಮಹೇಶ ಹಾದಿಮನಿ, ಸುರೇಶ ಗೊಜಗೋಜಿ, ಮಲ್ಲೇಶ ಬನ್ನಿ, ನಾಗಪ್ಪ ಕೋರಿ, ಗಿರೀಶ ಉಳ್ಳಟ್ಟಿ, ಜಯಶ್ರೀ ಕೋಷ್ಟಿ, ಪಾರವ್ವ ಬನ್ನಿ, ಬೀಬಿಜಾನ ನದಾಫ್, ಶಿದ್ದಮ್ಮ ಪೂಜಾರ, ಗಂಗಮ್ಮ ಗೊಜಗೋಜಿ, ಲಕ್ಷö್ಮವ್ವ ಕೋರಿ, ಈರವ್ವ ಕೋರಿ, ರತ್ನಮ್ಮ ಹೊಸಗೌಡ್ರ, ದ್ಯಾಮವ್ವ ಗೊಜಗೋಜಿ, ರೇಖಾ ಬನ್ನಿ ಸೇರಿದಂತೆ ಅನೇಕರು ಇದ್ದರು.