ಕಲಬುರ್ಗಿ:- ಲೋಕಾಯುಕ್ತ ಹೆಸರಲ್ಲಿ ವಾರ್ತಾ ಇಲಾಖೆಯ ಉಪ ನಿರ್ದೇಶಕರಿಗೆ ಹಣದ ಬೇಡಿಕೆ ಇಟ್ಟ ಘಟನೆ ಕಲಬುರಗಿಯಲ್ಲಿ ಜರುಗಿದೆ.
ಕಲಬುರಗಿ ವಾರ್ತಾ ಇಲಾಖೆಯ ಉಪ ನಿರ್ದೇಶಕರಾದ ಸಿದ್ದೇಶ್ವರಪ್ಪ ಜಿ ಬಿ ಅವರಿಗೆ ವಾಟ್ಸ್ ಆಪ್ ಕಾಲ್ ಮಾಡಿದ ಆರೋಪಿಗಳು, ಮೊದಲು ದಯಾನಂದ ಸಿ ಐ ಅಂತ ಪರಿಚಯ ಮಾಡಿಕೊಂಡು ಬಳಿಕ ಒಂದು ಲಕ್ಷಕ್ಕೆ ಬೇಡಿಕೆ ಇಟ್ಟಿದ್ದಾರೆ.
ನಿಮ್ಮ ವಿರುದ್ಧ ದೂರು ಬಂದಿದೆ , ನಮ್ಮ ಹಂತದಲ್ಲೆ ಬಿ ರಿಪೋರ್ಟ್ ಹಾಕ್ತೇವೆ ಅಂತಾ ದಯಾನಂದ ಹೇಳಿದ್ದಾನೆ. ಕೊನೆಗೆ ಎಸ್ ಪಿ , ಎಡಿಜಿಪಿ ಜೊತೆ ಮಾತಾನಾಡುವಂತೆ ಬೇರೆಯವರಿಗೆ ಕರೆ ಟ್ರಾನ್ಸಫರ್ ಮಾಡಿದ್ದಾನೆ.
ಒಂದು ಲಕ್ಷ ಹಣ ಕೊಡಬೇಕು ಇಲ್ಲದೆ ಹೋದರೆ ಕಲಬುರಗಿ ವಾರ್ತಾ ಇಲಾಖೆಯ ಕಚೇರಿ ಮೇಲೆ ದಾಳಿ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ.
ಹೀಗಾಗಿ ಲೋಕಾಯುಕ್ತರ ಹೆಸರಲ್ಲಿ ಹಣಕ್ಕೆ ಬೇಡಿಕೆ ಇಟ್ಟಿದ್ದ ಆರೋಪಿಗಳ ವಿರುದ್ಧ ವಾರ್ತಾ ಇಲಾಖೆ ಉಪ ಉಪನಿರ್ದೇಶಕ ಸಿದ್ದೇಶ್ವರಪ್ಪ ಜಿಬಿ ಅವರು, ಸ್ಡೇಷನ್ ಬಜಾರ್ ಪೊಲೀಸ್ ಠಾಣೆಯಲ್ಲಿ ದೂರು ಕೊಟ್ಟಿದ್ದು, ದೂರಿನ ಅನ್ವಯ ಪೊಲೀಸರು ತನಿಖೆ ಕೈಗೊಂಡಿದ್ದಾರೆ.