ಬೆಂಗಳೂರು:- ಪೊಲೀಸ್ ಹೆಡ್ ಕಾನ್ ಸ್ಟೇಬಲ್ ಓರ್ವರು ಲಂಚ ಸ್ವೀಕರಿಸುತ್ತಿದ್ದಾಗಲೇ ರೆಡ್ ಹ್ಯಾಂಡಾಗಿ ಲೋಕಾ ಬಲೆಗೆ ಬಿದ್ದಿರುವ ಘಟನೆ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಜರುಗಿದೆ.
ಎಸ್, ಪ್ರಕರಣವೊಂದರಲ್ಲಿ ಕೈಬಿಟ್ಟು ಸಾಕ್ಷಿದಾರನಾಗಿ ಪರಿಗಣಿಸಲು 1 ಲಕ್ಷಕ್ಕೆ ಡಿಮ್ಯಾಂಡ್ ಮಾಡಿ ಲಂಚ ಪಡೆಯುವಾಗ ವೈಯಾಲಿಕಾವಲ್ ಠಾಣೆಯ ಹೆಡ್ ಕಾನ್ ಸ್ಟೇಬಲ್ ದಯಾನಂದ ಅವರು ಲೋಕಾ ಅಧಿಕಾರಿಗಳ ಬಲೆಗೆ ಬಿದ್ದಿದ್ದಾರೆ.
ಹೌದು, ಕರವೇ ನಾಯಕರೊಬ್ಬರ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ ಆರೋಪದಡಿ ಶಿವರಾಮೇಗೌಡ ಎಂಬುವರ ವಿರುದ್ಧ ಪ್ರಕರಣ ದಾಖಲಾಗಿತ್ತು. ದೂರುದಾರರಾಗಿರುವ ರಾಘವೇಂದ್ರ ಅವರ ಒಡೆತನದ ಯೂಟ್ಯೂಬ್ ಚಾನೆಲ್ ವೊಂದರಲ್ಲಿ ಅವಹೇಳನಕಾರಿ ಹೇಳಿಕೆ ವಿಡಿಯೋ ಬಿತ್ತರವಾಗಿತ್ತು. ಈ ಸಂಬಂಧ ತನಿಖೆ ನಡೆಸಿ ಪ್ರಕರಣದಿಂದ ಕೈಬಿಡಲು ಹಾಗೂ ಸಾಕ್ಷಿಯನ್ನಾಗಿ ಮಾಡಲು 1 ಲಕ್ಷ ಹಣ ನೀಡುವಂತೆ ಹೆಡ್ ಕಾನ್ ಸ್ಟೇಬಲ್ ದಯಾನಂದ ಬೇಡಿಕೆಯಿಟ್ಟಿದ್ದರು.
ಇದರಂತೆ ಮುಂಗಡವಾಗಿ 50 ಸಾವಿರ ರೂಪಾಯಿ ಹಣ ಪಡೆಯುವಾಗ ರೆಡ್ ಹ್ಯಾಂಡಾಗಿ ಸಿಕ್ಕಿಬಿದ್ದಿದ್ದು, ಲೋಕಾಯುಕ್ತ ಅಧಿಕಾರಿಗಳು ಹೆಚ್ಚಿನ ತನಿಖೆ ಕೈಗೊಡಿದ್ದಾರೆ.