ವಿಜಯಸಾಕ್ಷಿ ಸುದ್ದಿ, ಗದಗ: ಸಂಸತ್ ಭವನದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರರಿಗೆ ಅವಮಾನ ಮಾಡಿರುವುದನ್ನು ಖಂಡಿಸಿ ಯುವ ಕರ್ನಾಟಕ ಭೀಮ್ ಸೇನೆ ಯುವ ಶಕ್ತಿ ಸಂಘ ಗದಗ ಜಿಲ್ಲಾ ಘಟಕದ ವತಿಯಿಂದ ಪಾದಯಾತ್ರೆಯ ಮೂಲಕ ತೆರಳಿ ಗದಗ ಜಿಲ್ಲಾಧಿಕಾರಿಗಳ ಮೂಲಕ ರಾಷ್ಟçಪತಿಗಳಿಗೆ ಮನವಿ ಸಲ್ಲಿಸಲಾಯಿತು.
ಸಂಘದ ಗದಗ ಜಿಲ್ಲಾ ಘಟಕದ ಅಧ್ಯಕ್ಷ ರಾಮು ಬಾಗಲಕೋಟ ಮಾತನಾಡಿ, ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರರ ಘನತೆಗೆ ಕುಂದು ಬರುವ ಹಾಗೆ ನಡೆದುಕೊಂಡ ಕೇಂದ್ರ ಗೃಹ ಮಂತ್ರಿಗಳಾದ ಅಮಿತ್ ಶಾ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು.
ಖಾಜಿಸಾಬ ಗಬ್ಬೂರವರು ಮಾತನಾಡಿ, ಡಾ. ಬಿ.ಆರ್. ಅಂಬೇಡ್ಕರರನ್ನು ವಿರೋಧಿಸುವುದು ಒಂದೇ, ಭಾರತವನ್ನು ವಿರೋಧಿಸುವುದೂ ಒಂದೇ ಆಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಆನಂದ ಗಡ್ಡದೇವರ, ಜಬಿವುಲ್ಲಾ ಬೋದ್ಲೆಖಾನ ಮಾತನಾಡಿದರು. ಮನವಿ ಸ್ವೀಕರಿಸಿದ ಜಿಲ್ಲಾಧಿಕಾರಿಗಳಿಗೆ, ರಕ್ಷಣೆ ನೀಡಿದ ಪೊಲೀಸ್ ಇಲಾಖೆಗೆ, ಮಾಧ್ಯಮ ಮಿತ್ರರಿಗೆ, ಸಂಘದ ಎಲ್ಲ ಸದಸ್ಯರಿಗೂ ರಫೀಕ ಕರೆಕಾಯಿ ಕೃತಜ್ಞತೆಗಳನ್ನು ತಿಳಿಸಿದರು.
ಈ ಸಂದರ್ಭದಲ್ಲಿ ನಾಸೀರ ಚಿಕೇನಕೊಪ್ಪ, ಸಾದಿಕ್ ಧಾರವಾಡ, ವೆಂಕಪ್ಪ ತಾಳದವರ, ಮೆಹಬೂಬ ಬೆಟಗೇರಿ, ಅಲ್ತಾಫ ಕಟ್ಟಿಮನಿ, ನಜೀರ ಬಳ್ಳಾರಿ, ವಿಠ್ಠಲ ವಿಭೂತಿ, ರಶೀದ ನಾಗರದಿನ್ನಿ, ಇರ್ಫಾನ ಶಿರಹಟ್ಟಿ, ತಾಜುದ್ದೀನ ಕಳಸಾಪೂರ, ಪರಶುರಾಮ ಬೆಟಗೇರಿ, ದುರಗೇಶ ಕಿನ್ನರಿ, ಮೆಹಬೂಬ ಬೆಟಗೇರಿ, ಇಸಾಕ್ ನದಾಫ್, ತನ್ವೀರ ಬಡೆದಾವಜಿ, ತೌಸಿಫ ಬೋಗೇರಿ, ತೌಫೀಕ್ ಹತ್ತಿವಾಲೆ, ಮಹಮ್ಮದರಫೀಕ ಹಣಗಿ, ಮುಸ್ತ್ತಫಾ ಶಿರೋಳ ಮುಂತಾದವರಿದ್ದರು.