ಹಾವೇರಿ: ಜಮೀನಿನ ನಕಾಶೆ ಪೂರೈಸಲು 30 ಸಾವಿರ ಲಂಚದ ಹಣಕ್ಕೆ ಬೇಡಿಕೆ ಇಟ್ಟಿದ್ದ ಭೂಮಾಪಕ ಲೋಕಾಯುಕ್ತ ಅಧಿಕಾರಿಗಳ ಬಲೆಗೆ ಬಿದ್ದಿದ್ದಾರೆ. ಅಶೋಕ ಎಚ್. ಜಿ. ಬಂಧಿತ ಆರೋಪಿಯಾಗಿದ್ದು, ಹಾವೇರಿ ತಾಲೂಕಿನ ಕಳ್ಳಿಹಾಳ ಗ್ರಾಮದ ಮಂಜುನಾಥ ಗದಿಗೆಪ್ಪ ತಂದೆಯವರಿಗೆ ಸಂಬಂಧಿಸಿದ ಜಮೀನು ವಾಟ್ನಿ ಮಾಡಿಸಲು ಅರ್ಜಿ ಸಲ್ಲಿಸಿದ್ದರು.
Advertisement
ಇದರ ನಕಾಶೆ ಪೂರೈಸಲು ಹಾವೇರಿ ತಾಲೂಕ ಕಚೇರಿಯ ಭೂಮಾಪಕ ಅಶೋಕ ಎಚ್. ಜಿ. 30 ಸಾವಿರ ಲಂಚದ ಹಣಕ್ಕೆ ಬೇಡಿಕೆ ಇಟ್ಟಿದ್ದರು. ನಂತರ 25 ಸಾವಿರ ರೂಪಾಯಿಗೆ ಒಪ್ಪಿಕೊಂಡು 15 ಸಾವಿರ ಮುಂಗಡ ಹಣ ಸ್ವೀಕರಿಸುವಾಗ ಹಾವೇರಿ ಡಿಸಿ ಕಚೇರಿ ರಸ್ತೆಯ ಬಸವೇಶ್ವರ ನಗರದ 12ನೇ ಕ್ರಾಸ್‌ನಲ್ಲಿ ಲೋಕಾಯುಕ್ತ ಅಧಿಕಾರಿಗಳ ಕೈಗೆ ಸಿಕ್ಕಿಬಿದ್ದಿದಾರೆ.ಆರೋಪಿಯನ್ನು ಬಂಧಿಸಿ ತನಿಖೆ ಮುಂದುವರೆಸಿದ್ದಾರೆ.