ಚಿತ್ರದುರ್ಗ:- ಕಂಟ್ರ್ಯಾಕ್ಟರ್ ಬಳಿ ಲಂಚ ಸ್ವೀಕರಿಸುತ್ತಿದ್ದ ಚಿತ್ರದುರ್ಗದ ಬೆಸ್ಕಾಂ ನ E E ಲೋಕಾಯುಕ್ತ ಅಧಿಕಾರಿಗಳ ಬಲೆಗೆ ಬಿದ್ದಿರುವ ಘಟನೆ ಜರುಗಿದೆ.
Advertisement
ತಿಮ್ಮರಾಯಪ್ಪ ಲೋಕಾ ಬಲೆಗೆ ಬಿದ್ದ ಚಿತ್ರದುರ್ಗದ ಬೆಸ್ಕಾಂ ನ E E. ಇವರು ಬೆಸ್ಕಾಂ ಕಂಟ್ರ್ಯಾಕ್ಟರ್ ಬಳಿ 35 ಲಕ್ಷದ ಟೆಂಡರ್ ಗೆ 10% ಪರ್ಸೆಂಟ್ ರಂತೆ ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಅದರಂತೆ 3.5 ಲಕ್ಷ ಹಣ ಸ್ವೀಕರಿಸುವಾಗ ರೆಡ್ ಹ್ಯಾಂಡ್ ಆಗಿ ಲೋಕಾ ಬಲೆಗೆ ಬಿದ್ದಿದ್ದಾರೆ.
ಲಂಚಕ್ಕೆ ಬೇಡಿಕೆ ಇಟ್ಟ ಕುರಿತು ಕಂಟ್ರ್ಯಾಕ್ಟರ್ ಸಂಜಯ್ ಎಂಬುವವರು ಲೋಕಾಯುಕ್ತಕ್ಕೆ ದೂರು ಕೊಟ್ಟಿದ್ದರು. ದೂರಿನ ಅನ್ವಯ ಲೋಕಾಯುಕ್ತ ಎಸ್ಪಿ ವಾಸುದೇವರಾಂ ನೇತೃತ್ವದಲ್ಲಿ ದಾಳಿ ನಡೆಸಿ ರೆಡ್ ಹ್ಯಾಂಡ್ ಆಗಿ ಲಾಕ್ ಮಾಡಿದ್ದಾರೆ. ಅಲ್ಲದೇ ಹೆಚ್ಚಿನ ವಿಚಾರಣೆ ಕೈಗೊಂಡಿದ್ದಾರೆ.