HomeGadag Newsಅಭಿವೃದ್ಧಿಗೆ ಅನುದಾನದ ಕೊರತೆ : ಡಾ. ಚಂದ್ರು ಲಮಾಣಿ

ಅಭಿವೃದ್ಧಿಗೆ ಅನುದಾನದ ಕೊರತೆ : ಡಾ. ಚಂದ್ರು ಲಮಾಣಿ

For Dai;y Updates Join Our whatsapp Group

Spread the love

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ : ಪಟ್ಟಣದ ಸವಣೂರು ರಸ್ತೆಯ ಉಪನಾಳ ಪಾರ್ಕ್ ಬಡಾವಣೆಯ ನಿವಾಸಿಗಳು ಮೂಲಭೂತ ಸೌಲಭ್ಯಗಳಿಗೆ ಆಗ್ರಹಿಸಿ ಶಾಸಕ ಡಾ. ಚಂದ್ರು ಲಮಾಣಿ ಅವರಿಗೆ ಮನವಿ ಸಲ್ಲಿಸಿದ್ದರು. ಈ ಹಿನ್ನೆಲೆಯಲ್ಲಿ, ಬುಧವಾರ ಬಡಾವಣೆಗೆ ಆಗಮಿಸಿದ ಶಾಸಕರೆದುರು ಸಮಸ್ಯೆಗಳ ಕುರಿತಾಗಿ ಸ್ಥಳೀಯರು ವಿವರಿಸಿದರು.

ಹಲವಾರು ವರ್ಷಗಳಿಂದ ಸಮರ್ಪಕ ನೀರು, ರಸ್ತೆ, ಚರಂಡಿ, ಬೀದಿದೀಪಗಳಿಲ್ಲದೆ ಪರದಾಡುತ್ತಿದ್ದೇವೆ. ಪುರಸಭೆಗೆ ಅನೇಕ ಬಾರಿ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ. ನಮ್ಮ ಬಡಾವಣೆಯಲ್ಲಿಯೇ ಇಡೀ ಪಟ್ಟಣಕ್ಕೆ ನೀರು ಸರಬರಾಜು ಮಾಡುವ ಜಲಾಗಾರ, ಬೋರ್‌ವೆಲ್ ಇದ್ದರೂ ಕಳೆದ ಒಂದು ತಿಂಗಳಿಂದ ನೀರು ಬಂದಿಲ್ಲ ಎಂದು ವಿವರಿಸಿ, ಬಡಾವಣೆಯಲ್ಲಿರುವ ಸುಬ್ರಮಣ್ಯಸ್ವಾಮಿ ದೇವಸ್ಥಾನಕ್ಕೆ ನಿವೇಶನ ಒದಗಿಸುವಂತೆಯೂ ಮನವಿ ಮಾಡಿದರು.

ಈ ವೇಳೇ ಬಡಾವಣೆಯ ನಕ್ಷೆಯನ್ನು ಪರಿಶೀಲಿಸಿದ ಶಾಸಕ ಡಾ.ಚಂದ್ರು ಲಮಾಣಿ ಖಾಲಿ ಇರುವ ಜಾಗೆಗಳ ಬಗ್ಗೆ ಮಾಹಿತಿ ಪಡೆದುಕೊಂಡರು. ತಾತ್ಕಾಲಿಕ ಚರಂಡಿ, ರಸ್ತೆ ಸರಿಪಡಿಸಲು ಸೂಚಿಸಿದರು. 2 ದಿನಗಳಲ್ಲಿ ಬೋರವೆಲ್‌ಗಳನ್ನು ದುರಸ್ಥಿಪಡಿಸಿ ಪೈಪ್‌ಲೈನ್ ದುರಸ್ತಿಗೊಳಿಸಿ ಇಲ್ಲಿನ ಜನರಿಗೆ ನೀರಿನ ವ್ಯವಸ್ಥೆ ಮಾಡಬೇಕು ಎಂದು ಪುರಸಭೆ ಸಿಬ್ಬಂದಿಗಳಿಗೆ ಸೂಚನೆ ನೀಡಿದರು.

ಈ ವೇಳೆ ನೀಲಪ್ಪ ಹತ್ತಿ, ಆರ್.ಎಫ್. ರಿತ್ತಿ, ಮುರಳೀಧರ ಹುಬ್ಬಳ್ಳಿ, ಆರ್.ಎಫ್. ದೊಡ್ಡಮನಿ, ಲೋಕಪ್ಪ ಘಂಟಿ, ಎನ್.ಡಿ. ಸೂರಣಗಿ, ಅಶೋಕ ಕಲ್ಲಣ್ಣವರ, ವಿ.ಎನ್. ಶೆಟ್ಟರ, ಬಿ.ಎಫ್. ಶಿರೂರ, ಮಲ್ಲಿಕಾರ್ಜುನ ದೊಡ್ಡೂರ, ರಮೇಶರೆಡ್ಡಿ ಮೇಲಗೇರಿ, ರಾಮಣ್ಣ ಬಾಕಳೆ, ಬಿ.ಆರ್. ಶಿರಗಾಂವಿ ಸದಾನಂದ ಸಂಬಾಜಿ, ಮಂಜುನಾಥ ಕಾಟಿಗೇರ ಮತ್ತಿತರರಿದ್ದರು.

ಈ ವೇಳೆ ಮಾತನಾಡಿದ ಡಾ. ಚಂದ್ರು ಲಮಾಣಿ, ಪಟ್ಟಣದಲ್ಲಿ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಸರಕಾರದ ಮಟ್ಟದಲ್ಲಿ ಪ್ರಯತ್ನಗಳನ್ನು ಮಾಡಲಾಗುತ್ತಿದೆ. ಸರಕಾರದಿಂದ ನಿರೀಕ್ಷಿತ ಮಟ್ಟದಲ್ಲಿ ಅನುದಾನ ದೊರೆಯದಿರುವದರಿಂದ ಕ್ಷೇತ್ರದಲ್ಲಿ ಅಭಿವೃದ್ಧಿ ಕಾರ್ಯಗಳಿಗೆ ಹಿನ್ನಡೆಯಾಗುತ್ತಿದೆ. ಪಟ್ಟಣದ ವಾರ್ಡ್ಗಳಲ್ಲಿ ಪುರಸಭೆಯ ಅನುದಾನದಲ್ಲಿ ಅಭಿವೃದ್ಧಿ ಕೈಗೊಳ್ಳಬೇಕು ಎಂದರು.

 


Spread the love

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!