ಪರೀಕ್ಷೆಗೆ ಕೂರಿಸಲು ಹಣಕ್ಕೆ ಬೇಡಿಕೆ: ಕಾಲೇಜು ಪ್ರಿನ್ಸಿಪಾಲ್ ಲೋಕಾ ಬಲೆಗೆ

0
Spread the love

ಚಿಕ್ಕಮಗಳೂರು: ವಿದ್ಯಾರ್ಥಿಗಳಿಗೆ ಪರೀಕ್ಷೆಗೆ ಕೂರಿಸಲು ಹಣಕ್ಕೆ ಬೇಡಿಕೆ ಇಟ್ಟ ಆರೋಪದ ಮೇಲೆ ಪ್ರಥಮ ದರ್ಜೆ ಕಾಲೇಜು ಪ್ರಿನ್ಸಿಪಾಲ್ ಲೋಕಾ ಬಲೆಗೆ ಬಿದ್ದಿದ್ದಾರೆ. ಕಡೂರು ತಾಲೂಕಿನ ಬೀರೂರು ಫಸ್ಟ್ ಗ್ರೇಡ್ ಕಾಲೇಜಿನಲ್ಲಿ ಘಟನೆ ನಡೆದಿದ್ದು, ಪ್ರಿನ್ಸಿಪಾಲ್ ಪ್ರವೀಣ್, ಎಫ್.ಡಿ.ಎ. ಸದಾಶಿವಯ್ಯ ಲೋಕಾ ಬಲೆಗೆ ಬಿದ್ದವರಾಗಿದ್ದು,

Advertisement

ಹಾಜರಾತಿ ಕೊರತೆಯಿಂದ ವಿದ್ಯಾರ್ಥಿಗಳಿಂದ ಹಣ ಪಡೆದು ಪರೀಕ್ಷೆಗೆ ಅನುಮತಿ ನೀಡಲು 4000 ಹಣ ಪಡೆಯುವಾಗ ಪ್ರಿನ್ಸಿಪಾಲ್ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.

8 ವಿದ್ಯಾರ್ಥಿಗಳಿಗೆ ಪರೀಕ್ಷೆಗೆ ಕೂರಲು ಹಾಜರಾತಿ ಕೊರತೆಯಾಗಿದೆ. 8 ವಿದ್ಯಾರ್ಥಿಗಳ ಬಳಿಯೂ ಪ್ರಿನ್ಸಿಪಾಲ್ ಹಣಕ್ಕೆ ಬೇಡಿಕೆ ಇಟ್ಟಿದ್ದರು. ಎಫ್.ಡಿ.ಎ. ಸದಾಶಿವಯ್ಯಗೆ ಫೋನ್ ಪೇ ನಲ್ಲಿ ವಿದ್ಯಾರ್ಥಿಗಳು 10000 ಸಾವಿರ ಹಾಕಿದ್ದರು. ಇಂದು 4000 ಹಣ ಕ್ಯಾಶ್ ಪಡೆದುಕೊಳ್ಳುವಾಗ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.


Spread the love

LEAVE A REPLY

Please enter your comment!
Please enter your name here