ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ : ಸಮೀಪದ ಗೋವನಾಳ ಗ್ರಾಮದಲ್ಲಿ ಸೋಮವಾರ ಶಿಗ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರದ ಸಿಬ್ಬಂದಿಗಳು ಲಾರ್ವಾ ಸಮೀಕ್ಷೆ ನಡೆಸಿ ಡೆಂಘೀ ಜ್ವರ ಹರಡುವ ಬಗ್ಗೆ ಜಾಗೃತಿ ಮೂಡಿಸಿದರು.
ಆರೋಗ್ಯ ಕೇಂದ್ರದ ಸಿಬ್ಬಂದಿಗಳು ಎರಡು ತಂಡಗಳಾಗಿ ಗೋವನಾಳ ಗ್ರಾಮದಲ್ಲಿ ಮನೆ ಮನೆಗಳಿಗೆ ತೆರಳಿ ಲಾರ್ವಾ ಸಮೀಕ್ಷೆಯನ್ನು ನಡೆಸಿದರು. ಅಲ್ಲಿನ ಜನರಿಗೆ ಲಾರ್ವಾ ಕಂಡು ಹಿಡಿಯುವದು ಮತ್ತು ಅವುಗಳನ್ನು ನಾಶಪಡಿಸುವ ಕುರಿತು ಅರಿವು ಮೂಡಿಸಲಾಯಿತು. ಲಾರ್ವಾ ಸೊಳ್ಳೆಗಳಾಗಿ ಪರಿವರ್ತನೆಯಾಗಿ ಉಂಟಾಗುತ್ತಿರುವ ರೋಗಗಳ ಬಗ್ಗೆ ಮಾಹಿತಿ ನೀಡಲಾಯಿತು. ಇವುಗಳಿಂದ ಡೆಂಘೀ, ಚಿಕೂನ್‌ಗುನ್ಯಾ ರೋಗಗಳ ಬರುವ ಬಗ್ಗೆ ಆಯ್.ಇ.ಸಿ ಮಾಡಿ ಅಲ್ಲಲ್ಲಿ ಗುಂಪು ಸಭೆಗಳನ್ನಾಗಿ ಮಾಡಿ ಮುನ್ನೆಚ್ಚರಿಕೆ ಕ್ರಮಗಳ ಅರಿವು ಮೂಡಿಸಲಾಯಿತು.
ಈ ಸಂದರ್ಭದಲ್ಲಿ ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಪ್ರಕಾಶ ಕರ್ಜಗಿ, ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಎಫ್.ಸಿ. ಹೊಸಮಠ, ಜಿ.ಬಿ. ಬಣಗಾರ, ಬಿ.ಟಿ. ಹಂಚಿನಾಳ, ವಿಜಯ ದುರ್ಗಣ್ಣವರ, ಹೇಮಾ ಅಂಗಡಿ ಹಾಗೂ ಆಶಾ ಕಾರ್ಯಕರ್ತೆಯರು ಹಾಜರಿದ್ದರು.