ವಿಜಯಸಾಕ್ಷಿ ಸುದ್ದಿ, ಗದಗ : ಜಿಮ್ಸ್ ಗದಗ ಆವರಣದಲ್ಲಿರುವ ಜಿಎನ್‌ಎಮ್ ನರ್ಸಿಂಗ್ ಕಾಲೇಜಿನಲ್ಲಿ ಡೆಂಘೀ ರೋಗದ ಬಗ್ಗೆ ಆರೋಗ್ಯ ಶಿಕ್ಷಣ ನೀಡಲಾಯಿತು.
Advertisement
  
ಪ್ರಾಥಮಿಕ ಆರೋಗ್ಯ ಕೇಂದ್ರ ಹರ್ತಿಯ ಆರೋಗ್ಯ ನಿರೀಕ್ಷಣಾಧಿಕಾರಿ ಮಂಜುನಾಥ ಸಜ್ಜನರ ಸ್ವರಚಿತ ಆರೋಗ್ಯ ಗೀತೆಗಳನ್ನು ಹಾಡುವ ಮೂಲಕ ಜಾಗೃತಿ ಮೂಡಿಸಿದರು. ನಿಂತ ನೀರು ಸೊಳ್ಳೆಗಳ ತವರು. ಈಡಿಸ್ ಜಾತಿಯ ಸೊಳ್ಳೆ ಈ ರೋಗ ತರುವುದು. ಮನೆಯಲ್ಲಿನ ನೀರು ಸಂಗ್ರಹ ಮಾಡುವ ಪರಿಕರಗಳನ್ನು ವಾರದಲ್ಲಿ ಎರಡು ಬಾರಿ ತೊಳೆದು ತುಂಬಿ ಎಂದು ತಿಳಿಸಿದರು.
ಸಮುದಾಯ ಆರೋಗ್ಯ ಅಧಿಕಾರಿ ರಾಧಿಕಾ ಶಾಪೂರ ಡೆಂಘೀ ರೋಗದ ಲಕ್ಷಣ, ಚಿಕಿತ್ಸೆ ಬಗ್ಗೆ ತಿಳಿಸಿದರು.
ಶಂಕ್ರಮ್ಮ ನೀರಲಗಿ ಸೊಳ್ಳೆಯ ಜೀವನ ಚಕ್ರದ ಕುರಿತು ತಿಳಿಸಿದರು. ಕಾಲೇಜಿನ ಪ್ರಾಂಶುಪಾಲರು ಹಾಗೂ ಉಪನ್ಯಾಸಕರು ಪಾಲ್ಗೊಂಡಿದ್ದರು.


