ಬೆಂಗಳೂರು: ಕಳೆದ ಮೂರು ವರ್ಷದ ಹಿಂದೆ ಜಗತ್ತನೆ ಇನ್ನಿಲ್ಲದ್ದಂತೆ ಕಾಡಿದ್ದ ಕೊರೊನಾ ಈಗ ಮತ್ತೆ ಏಷ್ಯಾದ ಕೆಲ ದೇಶಗಳಲ್ಲಿ ಮತ್ತೆ ಕೊವಿಡ್ ಪ್ರಕರಣಗಳಿಂದ ರಾಜ್ಯದಲ್ಲೂ ಆತಂಕ ಸೃಷ್ಟಿಯಾಗಿದೆ. ಇದರ ಜೊತೆಗೆ ಈಗ ಡೆಂಘಿ ಹಾಗೂ ಚಿಕುನ್ ಗುನ್ಯಾದ ಪ್ರಕರಣಗಳು ಕೂಡ ಉಲ್ಬಣವಾಗಿದೆ. ರಾಜಧಾನಿ ಬೆಂಗಳೂರು ಸೇರಿದ್ದಂತೆ ರಾಜ್ಯದಲ್ಲಿ ಡೆಂಘಿ ಹಾಗೂ ಚಿಕನ್ ಗೂನ್ಯಾ ಕೇಸ್ ಹೆಚ್ಚಳವಾಗುತ್ತಿದೆ.
ಮುಂಗಾರು ಮಳೆ ಎಫೆಕ್ಟ್ ಹಿನ್ನೆಲೆ ಬೆಂಗಳೂರು ಹಾಗೂ ರಾಜ್ಯದಲ್ಲಿ ಡೆಂಘಿ ಹಾಗೂ ಚಿಕನ್ ಗುನ್ಯಾ ಕೇಸ್ ಜಾಸ್ತಿಯಾಗಿದೆ. 25 ಸಾವಿರಕ್ಕೂ ಅಧಿಕ ಡೆಂಘಿ ಟೆಸ್ಟ್ ಮಾಡಲಾಗಿದ್ದು, 1 ಸಾವಿರಕ್ಕೂ ಹೆಚ್ಚು ಜನರಲ್ಲಿ ಡೆಂಘಿ ಜ್ವರ ಹಾಗೂ 366 ಜನರಲ್ಲಿ ಚಿಕನ್ ಗುನ್ಯಾ ದೃಢಪಟ್ಟಿದೆ.
ಬಿಬಿಎಂಪಿ ವ್ಯಾಪ್ತಿಯಲ್ಲಿ ಗರಿಷ್ಠ ಪ್ರಕರಣಗಳು ವರದಿಯಾಗಿದೆ. 4509 ಡೆಂಘಿ ಶಂಕಿತರ ರಕ್ತದ ಮಾದರಿಗಳನ್ನು ಪರೀಕ್ಷಿಸಲಾಗಿದೆ. ಅವರಲ್ಲಿ 705 ಮಂದಿಯಲ್ಲಿ ಡೆಂಘಿ ದೃಢಪಟ್ಟಿದೆ. ಸೊಳ್ಳೆ ಕಾಟದಿಂದ ರಾಜ್ಯದಲ್ಲಿ 821 ಜನರಲ್ಲಿ ಡೆಂಘಿ ಪತ್ತೆಯಾಗಿದ್ದು,
ಒಟ್ಟು 1526 ಜನರಲ್ಲಿ ಡೆಂಘಿ ಜ್ವರ ಕಂಡು ಬಂದಿದೆ. ಕಳೆದ ವರ್ಷ ಡೆಂಘಿ ಕೇಸ್ 32 ಸಾವಿರದ ಗಡಿ ದಾಟಿತ್ತು. ಈ ವರ್ಷ ಮೇ ನಲ್ಲಿಯೇ ಮಳೆ ಮುಂಗಾರು ಶುರುವಾಗಿದ್ದು, ಡೆಂಘಿ ಪ್ರಕರಣಗಳು ಹೆಚ್ಚಳವಾಗಿದೆ. ಡೆಂಘಿ ಜೊತೆ ಚಿಕನ್ ಗೂನ್ಯಾ ಕೇಸ್ ಕೂಡ ಬಂದಿವೆ. ರಾಜ್ಯದಲ್ಲಿ 366 ಚಿಕನ್ ಗೂನ್ಯಾ ಕೇಸ್ ಕಂಡು ಬಂದಿದ್ದು, ಆರೋಗ್ಯ ಇಲಾಖೆ ಅಲರ್ಟ್ ಆಗಿದೆ.