ವಿಜಯಸಾಕ್ಷಿ ಸುದ್ದಿ, ಗದಗ : ಡೆಂಘೀ ಜ್ವರವು ಸೊಳ್ಳೆಯಿಂದ ಹರಡುವ ಸಾಂಕ್ರಾಮಿಕ ರೋಗವಾಗಿದೆ. ಮಕ್ಕಳು ಸೊಳ್ಳೆಗಳ ಬಗ್ಗೆ ಎಚ್ಚರಿಕೆಯಿಂದ ಇರಬೇಕೆಂದು ಕವಿತಾ ಬೇಲೇರಿ ಹೇಳಿದರು.
ಅವರು ಗದುಗಿನ ಸರಕಾರಿ ಹಿ.ಪ್ರಾ.ಕ. ಗಂಡುಮಕ್ಕಳ ಶಾಲೆ ನಂ. 15ರಲ್ಲಿ ಡೆಂಘೀ ಜ್ವರದ ಕುರಿತು ವಿದ್ಯಾರ್ಥಿಗಳಿಗೆ ಏರ್ಪಡಿಸಿದ್ದ ಅರಿವು ಕಾರ್ಯಕ್ರಮದಲ್ಲಿ ಮಾತನಾಡಿದರು.
ಈಡಿಸ್ ಎಂಬ ಹೆಣ್ಣು ಸೊಳ್ಳೆಯಿಂದ ಡೆಂಘೀ ಹರಡುತ್ತಿದ್ದು, ಸೊಳ್ಳೆಗಳ ಕಡಿತದಿಂದ ನಮ್ಮನ್ನು ನಾವು ರಕ್ಷಿಸಿಕೊಳ್ಳಬೇಕು. ನಿಂತ ನೀರಿನ ಎಲ್ಲ ಮೂಲಗಳನ್ನು ಸ್ವಚ್ಛಗೊಳಿಸಬೇಕು, ಸೊಳ್ಳೆ ಪರದೆಗಳನ್ನು ಉಪಯೋಗಿಸಬೇಕೆಂದರು.
ಶಿಕ್ಷಕಿ ಪಿ.ಎಸ್. ಬ್ಯಾಳಿ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಡೆಂಗ್ಯೂ ಜ್ವರವು ಮಕ್ಕಳಲ್ಲಿ ಹೆಚ್ಚಾಗಿ ಕಂಡುಬರುತ್ತಿದ್ದು, ನಿಂತ ನೀರಿನಲ್ಲಿ ಮಕ್ಕಳು ಆಟವಾಡಕೂಡದು ಎಂದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಲಾ ಮುಖ್ಯೋಪಾಧ್ಯಾಯೆ ವ್ಹಿ.ಎಸ್. ಬಸಾಪೂರ, ಇದು ಮಳೆಗಾಲವಾಗಿದ್ದರಿಂದ ಸಾಮಾನ್ಯವಾಗಿ ಸೊಳ್ಳೆಗಳು ಹೆಚ್ಚಾಗಿರುತ್ತವೆ. ವಿದ್ಯಾರ್ಥಿಗಳು ಸುತ್ತಲಿನ ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕೆಂದರು.
ಬಿ.ಯಶೋಧಾ ಸ್ವಾಗತಿಸಿದರು. ವ್ಹಿ.ಬಿ. ಕರಬಸಗೌಡ್ರ ನಿರೂಪಿಸಿದರು. ಶೋಭಾ ವಗ್ಗಿ ವಂದಿಸಿದರು.