ಬೆಂಗಳೂರು:-ಬೆಂಗಳೂರಿಗೆ ಡೆಡ್ಲಿ ಡೆಂಗ್ಯೂ ಭೀತಿ ಜೋರಾಗಿದೆ. ರಾಜಧಾನಿಯಲ್ಲಿ ತಗ್ಗದ ಡೆಂಗ್ಯೂ ಆರ್ಭಟದಿಂದ ಜನರು ಹೈರಾಣಾ ಗಿದ್ದಾರೆ. ಕಳೆದೊಂದು ತಿಂಗಳಲ್ಲಿ ಬೆಂಗಳೂರಿನಲ್ಲಿ ದಾಖಲೆಯ ಕೇಸ್ ಪತ್ತೆಯಾಗಿವೆ. ಕಳೆದ 30 ದಿನಗಳಲ್ಲಿ ರಾಜಧಾನಿಯಲ್ಲಿ ಬರೊಬ್ಬರಿ 2970 ಹೊಸ ಡೆಂಗ್ಯೂ ಕೇಸ್ ಪತ್ತೆಯಾಗಿದೆ. ಕಳೆದ ತಿಂಗಳು ಕೊಂಚ ಇಳಿಕೆಯತ್ತ ಸಾಗಿದ್ದ ಹೆಮ್ಮಾರಿ ಡೆಂಗ್ಯೂ ಈಗ ಮತ್ತೆ ಸೈಲೆಂಟ್ ಆಗಿ ಏರಿಕೆಯತ್ತ ಸಾಗಿದೆ.
ರಾಜಧಾನಿಯಲ್ಲಿ ಈ ವರ್ಷ ಜನವರಿಯಿಂದ ಇಲ್ಲಿಯವರೆಗೆ ದಾಖಲೆಯ 7673 ಹೊಸ ಡೆಂಗ್ಯೂ ಕೇಸ್ ಕಾಣಿಸಿಕೊಂಡಿದ್ರೆ ಕಳೆದೊಂದೇ ತಿಂಗಳಲ್ಲಿ 2970 ಕೇಸ್ ಪತ್ತೆಯಾಗಿದೆ. ಇದು ಆರೋಗ್ಯ ಇಲಾಖೆಯ ತಲೆಬಿಸಿಗೆ ಕಾರಣವಾಗಿದೆ. ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಜನವರಿಯಿಂದ ಇಲ್ಲಿಯವರೆಗೆ 7228 ಕೇಸ್ ದಾಖಲಾಗಿದ್ರೆ ಕೇವಲ ಬೆಂಗಳೂರಿನಲ್ಲಿ 7673 ಡೆಂಗ್ಯೂ ಕೇಸ್ ಪತ್ತೆಯಾಗಿವೆ. ರಾಜಧಾನಿಯಲ್ಲಿ ನಿಲ್ಲದ ಡೆಂಗ್ಯೂ ಜ್ವರದ ಹಾವಳಿಯಿಂದ ಜನರು ಫುಲ್ ಸುಸ್ತಾಗಿದ್ದು ವೈದ್ಯರು ನಿರ್ಲಕ್ಷ್ಯವಹಿಸದಂತೆ ಎಚ್ಚರಿಕೆ ನೀಡಿದ್ದಾರೆ.
ಕಳೆದ ಒಂದು ತಿಂಗಳಿನಿಂದ ಬೆಂಗಳೂರು ನಗರದಲ್ಲಿ ಗರಿಷ್ಠ ಡೆಂಗ್ಯೂ ದಾಖಲಾಗಿದೆ. ಕಳೆದ ಮೂರು ವರ್ಷಗಳಲ್ಲಿಯೇ ಇದು ದಾಖಲೆ ಪ್ರಮಾಣದಲ್ಲಿ ಡೆಂಗ್ಯೂ ಕೇಸ್ ದಾಖಲಾಗಿವೆ. ರಾಜ್ಯದಲ್ಲಿ ಒಟ್ಟು ಜನವರಿಯಿಂದ ನಿನ್ನೆಯವರೆಗೆ 15000 ಸಾವಿರ ಗಡಿ ದಾಟಿರುವ ಡೆಂಗ್ಯೂ ಪಾಸಿಟಿವ್ ಕೇಸ್ ಸಾಕಷ್ಟು ಆತಂಕ ಹೆಚ್ಚಿಸಿದೆ. ಹೀಗಾಗಿ ವೈದ್ಯರು ಡೆಂಗ್ಯೂ ಬಗ್ಗೆ ನಿರ್ಲಕ್ಷ್ಯ ಬೇಡ ಎಂದಿದ್ದಾರೆ.