ದಾವಣಗೆರೆ:- ದಾವಣಗೆರೆ ಎಸ್‌ಪಿಎಸ್ ನಗರದಲ್ಲಿ ಹೃದಯವಿದ್ರಾವಕ ಘಟನೆ ಒಂದು ಜರುಗಿದೆ. ಪತ್ನಿ ಸಾವಿನಿಂದ ಖಿನ್ನತೆಗೆ ಒಳಗಾಗಿದ್ದ ಪತಿ ಓರ್ವ ತನ್ನಿಬ್ಬರು ಮಕ್ಕಳನ್ನು ಕೊಂದು ಬಳಿಕ ತಾನೂ ಸಹ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
4 ವರ್ಷದ ಸಿಂಧುಶ್ರೀ, 3 ವರ್ಷದ ಶ್ರೀಜಯ್ ನನ್ನು ಕೊಲೆಗೈದು ಬಳಿಕ ತಂದೆ 35 ವರ್ಷದ ಉದಯ್ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ. ಕೆಲ ತಿಂಗಳ ಹಿಂದೆ ಅನಾರೋಗ್ಯದಿಂದ ಉದಯ್ ಪತ್ನಿ ಮೃತಪಟ್ಟಿದ್ದರು. ಪತ್ನಿ ಸಾವಿನ ಬಳಿಕ ಖಿನ್ನತೆಗೆ ಒಳಗಾಗಿದ್ದ ಪತಿ ಉದಯ್ , ಇಂದು ಮಕ್ಕಳನ್ನು ಸಾಯಿಸಿ ಬಳಿಕ ತಾನೂ ಆತ್ಮಹತ್ಯೆಗೆ ಶರಣಾಗಿದ್ದಾನೆ. ಇನ್ನು ನೇಣಿಗೆ ಶರಣಾಗುವ ಮೊದಲು ರಕ್ತದಲ್ಲಿ ಐಲವ್ ಯು ಹೇಮಾ ಎಂದು ಪತ್ನಿಯ ಹೆಸರು ಗೋಡೆ ಮೇಲೆ ಬರೆದಿದ್ದಾರೆ.
ಹೇಮಾ ಹಾಗೂ ಉದಯ್ ಪರಸ್ಪರ ಪ್ರೀತಿಸಿ ಮದ್ವೆ ಆಗಿದ್ದರು. ಆದ್ರೆ, ಕಳೆದ ಎಂಟು ತಿಂಗಳ ಹಿಂದೆ ಪತ್ನಿ ಹೇಮಾ ಹೃದಯಾಘಾತದಿಂದ ಸಾವನ್ನಪ್ಪಿದ್ದಳು. ಪ್ರೀತಿಸಿ ಕೈಹಿಡಿದಾಕೆ ಶಾಶ್ವತವಾಗಿ ಬಿಟ್ಟು ಹೋಗಿದ್ದರಿಂದ ಉದಯ್ ನೋವಿನಲ್ಲಿದ್ದ. ಕೊನೆಗೆ ನೋವು ತಡೆದುಕೊಳ್ಳಲಾಗದೇ ಸಾವಿನ ತೀರ್ಮಾನ ಕೈಗೊಂಡಿದ್ದಾರೆ.
ಇನ್ನು ಮಕ್ಕಳನ್ನ ಉಸಿರು ಗಟ್ಟಿಸಿ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ.