ಇಬ್ಬರು ಮೇಲ್ವಿಚಾರಕರಿಂದ ಪರೀಕ್ಷಾ ಕರ್ತವ್ಯ ಲೋಪ: ವೆಬ್ ಕಾಸ್ಟಿಂಗ್ ನಿಂದ ಲಾಕ್

0
Spread the love

ಬೆಂಗಳೂರು: ಇಬ್ಬರು ಮೇಲ್ವಿಚಾರಕರಿಂದ ಪರೀಕ್ಷಾ ಕರ್ತವ್ಯಲೋಪ ಹಿನ್ನೆಲೆ ವೆಬ್ ಕಾಸ್ಟಿಂಗ್ ನಿಂದ ಲಾಕ್ ಆಗಿದ್ದಾರೆ. ಹೌದು ಬಿಎಂಟಿಸಿ, ಕೆಕೆಅರ್ ಟಿಸಿ ಯ ಖಾಲಿ ಹುದ್ದೆಗಳನ್ನು ನೇಮಕಾತಿಗೆ ಪರೀಕ್ಷೆ ಆರಂಭವಾಗಿದೆ. ಜುಲೈ 14ರಂದು ನಡೆದ ಪರೀಕ್ಷೆ ವೇಳೆ ಇಬ್ಬರು ಮೇಲ್ವಿಚಾರಕರ ಪರೀಕ್ಷಾ ಕರ್ತವ್ಯ ನಿರ್ವಹಣೆಯಲ್ಲಿ ಲೋಪ ಕಂಡು ಬಂದಿದೆ. ಪರೀಕ್ಷಾ ಕರ್ತವ್ಯ ನಿರ್ವಹಣೆಯಲ್ಲಿ ಲೋಪವೆಸಗಿರುವುದನ್ನು ವೆಬ್ ಕಾಸ್ಟಿಂಗ್ ನಿಂದ ಪತ್ತೆ ಹಚ್ಚಲಾಗಿದೆ.

Advertisement

ಈ ಇಬ್ಬರ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಎಚ್ ಪ್ರಸನ್ನ ಪತ್ರ ಬರೆದಿದ್ದಾರೆ. ಬೆಂಗಳೂರಿನ ಕೆ.ಆರ್ ವೃತ್ತದಲ್ಲಿರುವ ಎಸ್ ಜೆ ಪಾಲಿಟೆಕ್ನಿಕ್ ನ ಕೊಠಡಿ ಸಂಖ್ಯೆ 102 ರಲ್ಲಿ (ಕೇಂದ್ರ ಸಂಕೇತ 112),

ಕೊಠಡಿ ಮೇಲ್ವಿಚಾರಕರಾದ ಉಪನ್ಯಾಸಕ ಸಾಜಿದ್ ಅವರು ಪರೀಕ್ಷೆ ನಡೆಯುವಾಗ ಮೊಬೈಲ್ ನಲ್ಲಿ ಮಾತನಾಡುತ್ತಿರುವುದನ್ನು ಇಲ್ಲಿನ ಕೆಇಎ ಕಚೇರಿಯಲ್ಲಿರುವ ಕಮಾಂಡ್ ಸೆಂಟರ್ ನಿಂದ ಗಮನಿಸಲಾಗಿದೆ. ಇದು ಪರೀಕ್ಷಾ ಕರ್ತವ್ಯ ಲೋಪವಾದ್ದರಿಂದ ಈ ಬಗ್ಗೆ ಕ್ರಮ ತೆಗೆದುಕೊಳ್ಳುವಂತೆ ಕಾಲೇಜು ಶಿಕ್ಷಣ ಇಲಾಖೆ ಆಯುಕ್ತರಿಗೆ ಪತ್ರ ಬರೆದು ಕೋರಲಾಗಿದೆ.


Spread the love

LEAVE A REPLY

Please enter your comment!
Please enter your name here