ಜೈನ ಧರ್ಮದ ಬಗ್ಗೆ ಅವಹೇಳನಕಾರಿ ಪೋಸ್ಟ್‌: ಯುವಕ ಜೈಲುಪಾಲು!

0
Spread the love

ಚಿಕ್ಕಮಗಳೂರು:- ಇತ್ತೀಚಿನ ದಿನಗಳಲ್ಲಿ ಧರ್ಮಸ್ಥಳ ಬಗ್ಗೆ ಅಪಪ್ರಚಾರ ಮಾಡುತ್ತಿರುವವರ ಸಂಖ್ಯೆ ಹೆಚ್ಚಾಗಿದೆ. ಇದು ಭಕ್ತರನ್ನು ಕೆರಳಿಸುವಂತೆ ಮಾಡಿದೆ.

Advertisement

ಈ ನಡುವೆಯೇ ಜೈನ ಧರ್ಮದ ಹೆಣ್ಣು ಮಕ್ಕಳ ಬಗ್ಗೆ ಅವಹೇಳನಕಾರಿ ಪೋಸ್ಟ್‌ ಮಾಡಿದ್ದಕ್ಕೆ ಯುವಕನೊಬ್ಬ ಜೈಲುಪಾಲಾಗಿರುವ ಘಟನೆ ಜರುಗಿದೆ. ಉಮೇಶ್ ಗೌಡ ಎಂಬ ಯುವಕ ಆಗಸ್ಟ್‌ 2 ರಂದು ಜೈನ ಧರ್ಮದ ಹೆಣ್ಣು ಮಕ್ಕಳ ಬಗ್ಗೆ ಅತ್ಯಂತ ಕೆಟ್ಟ ಭಾಷೆಯಿಂದ ಕಾಮೆಂಟ್‌ ಮಾಡಿದ್ದ ಹಿನ್ನೆಲೆಯಲ್ಲಿ ಬಿಎನ್‌ಎಸ್‌ ಕಾಯ್ದೆ 196 (1) ಹಾಗೂ 353 (2) ಅಡಿ ಅಜ್ಜಂಪುರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪೊಲೀಸರು ಈಗ ಉಮೇಶ್ ಗೌಡನನ್ನು ಬಂಧಿಸಿದ್ದು ಕೋರ್ಟ್‌ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ ಎನ್ನಲಾಗಿದೆ.


Spread the love

LEAVE A REPLY

Please enter your comment!
Please enter your name here