ದೇವದುರ್ಗ: ಪತ್ರಕರ್ತರಿಗೆ ಅವಾಚ್ಯ ಶಬ್ಧ ಬಳಕೆ: ಪ್ರಿನ್ಸಿಪಾಲ್ ಅಮಾನತ್ತಿಗೆ ಆಗ್ರಹ!

0
Spread the love

ದೇವದುರ್ಗ :- ಪತ್ರಕರ್ತರಿಗೆ ಅವಾಚ್ಯ ಶಬ್ಧ ಬಳಕೆ ಮಾಡಿದ ಆರೋಪದಡಿ ಪ್ರಿನ್ಸಿಪಾಲ್ ಅಮಾನತ್ತಿಗೆ ಆಗ್ರಹ ಕೇಳಿ ಬಂದಿದೆ. ಕೊತ್ತದೊಡ್ಡಿ ಏಕಲವ್ಯ ಮಾದರಿ ವಸತಿ ಶಾಲೆಯ ಸುರೇಶ್ ವರ್ಮಾ ಎಂಬ ಪ್ರಿನ್ಸಿಪಲ್ ಪತ್ರಕರ್ತರಿಗೆ ಅವಮಾನಗೊಳಿಸಿದ ಕಾರಣಕ್ಕೆ ಅಮಾನತ್ ಗೊಳಿಸುವಂತೆ ಕಾರ್ಯ ನಿರತ ಪತ್ರಕರ್ತರ ಸಂಘಟನೆ ಮನವಿ ಮಾಡಿಕೊಳ್ಳಲಾಯಿತು.

Advertisement

ಕೊತ್ತದೊಡ್ಡಿ ಏಕಲವ್ಯ ವಸತಿ ಶಾಲೆಯಲ್ಲಿ ಸಾಂಕ್ರಾಮಿಕ ರೋಗಗಳು ವ್ಯಾಪಕವಾಗಿದ್ದು ಏಕಕಾಲಕ್ಕೆ ಶೀತ ಜ್ವರ ಕೆಮ್ಮು ತಲೆ ಸುತ್ತುವುದರಿಂದ ಅನಾರೋಗ್ಯಕ್ಕೆ ತುತ್ತಾದ 34 ವಿದ್ಯಾರ್ಥಿಗಳು ಅರಕೇರ ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ತಪಾಸಣೆ ಮಾಡಿಸಿಕೊಳ್ಳುವ ಸಂದರ್ಭದಲ್ಲಿ ಪತ್ರಕರ್ತರು ವಿಡಿಯೋ, ಫೋಟೋವನ್ನು ಚಿತ್ರಿಸಿಕೊಂಡಿದ್ದರು.

ಈ ವೇಳೆ ಜವಾಬ್ದಾರಿಯುತ ಸ್ಥಾನದಲ್ಲಿರುವ ಪ್ರಿನ್ಸಿಪಲ್ ಸುರೇಶ್ ವರ್ಮಾ ಅವರು ಮಾಹಿತಿ ಮತ್ತು ಚಿತ್ರ ಸಂಗ್ರಹಿಸಿದ ಪತ್ರಕರ್ತರ ಮೇಲೆ ರೇಗಿ ಏಕವಚನ, ಅಶ್ಲೀಲ ಪದ ಬಳಕೆ ಮಾಡಿ ಅನೂಚಿತವಾಗಿ ವರ್ತಸಿ ಪತ್ರಕರ್ತರ ಘನತೆಗೆ ಅಗೌರವ ಸಲ್ಲಿಸಿರುತ್ತಾರೆ. ಹೀಗಾಗಿ ಅಮಾನತು ಮಾಡುವಂತೆ ಆಗ್ರಹಿಸಿದರು


Spread the love

LEAVE A REPLY

Please enter your comment!
Please enter your name here