ವಿದ್ಯಾರ್ಥಿಗಳು ವೈಜ್ಞಾನಿಕ ಮನೋಭಾವ ಬೆಳೆಸಿಕೊಳ್ಳಿ

0
Spread the love

ವಿಜಯಸಾಕ್ಷಿ ಸುದ್ದಿ, ಗದಗ: ಶಿಕ್ಷಣ ನಿರಂತರ ಹರಿಯುವಂತಹ ಪ್ರವಾಹವಾಗಿದೆ. ವಿದ್ಯಾರ್ಥಿಗಳು ನೂತನ ಆವಿಷ್ಕಾರಗಳನ್ನು ತಮ್ಮ ಶೈಕ್ಷಣಿಕ ಅಧ್ಯಯನದಲ್ಲಿ ಅಳವಡಿಸಿಕೊಳ್ಳುವ ಮೂಲಕ ವೈಜ್ಞಾನಿಕ ಮನೋಭಾವನೆ, ಚಿಂತನೆಗಳನ್ನು ಬೆಳೆಸಿಕೊಳ್ಳಬೇಕೆಂದು ಗದುಗಿನ ಯುವ ಧುರೀಣ, ಶಿಕ್ಷಣ ಪ್ರೇಮಿ ಆಂಜನೇಯ ಕಟಗಿ ಹೇಳಿದರು.

Advertisement

ಅವರು ಶುಕ್ರವಾರ ಗದಗ ತಾಲೂಕಿನ ಸೊರಟೂರ ಗ್ರಾಮದ ಕರ್ನಾಟಕ ಪಬ್ಲಿಕ್ ಸ್ಕೂಲ್‌ನಲ್ಲಿ ಬಿ.ಜಿ. ಅಣ್ಣಿಗೇರಿ ಗುರುಗಳ ಪ್ರತಿಭಾ ಪ್ರತಿಷ್ಠಾನದಿಂದ ಎಸ್‌ಎಸ್‌ಎಲ್‌ಸಿಯಲ್ಲಿ ಮೊದಲ 5 ಸ್ಥಾನ ಪಡೆದುಕೊಂಡ ಗದಗ ತಾಲೂಕಿನ ಸರ್ಕಾರಿ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಮಾತನಾಡಿದರು

ಸರ್ಕಾರಿ ಶಾಲಾ ಮಕ್ಕಳ ಶೈಕ್ಷಣಿಕ ಅಭಿವೃದ್ಧಿಗೆ ಸರ್ಕಾರ ಹಲವಾರು ಯೋಜನೆಗಳನ್ನು ರೂಪಿಸಿ ವಿದ್ಯಾರ್ಥಿಗಳಿಗೆ ನೆರವಾಗುತ್ತಿದೆ. ಅದರೊಟ್ಟಿಗೆ ಬಿ.ಜಿ. ಅಣ್ಣಿಗೇರಿ ಗುರುಗಳ ಪ್ರತಿಭಾ ಪ್ರತಿಷ್ಠಾನವೂ ಸಹ ಪ್ರತಿಭಾನ್ವಿತರಿಗೆ ಪ್ರೋತ್ಸಾಹಿಸುವ ಕಾರ್ಯ ಮಾಡುತ್ತಿರುವದು ಅಭಿನಂದನೀಯ ಎಂದರು.

ಮುಖ್ಯ ಅತಿಥಿ ಡಾ. ಶರಣಬಸವ ಚೌಕಿಮಠ ಮಾತನಾಡಿ, ಗ್ರಾಮೀಣ ಪ್ರದೇಶದ ಅದರಲ್ಲೂ ವಿಶೇಷವಾಗಿ ಸರ್ಕಾರಿ ಶಾಲೆಗಳಲ್ಲಿ ವಿದ್ಯಾಭ್ಯಾಸ ಮಾಡಿ ಉತ್ತಮ ಫಲಿತಾಂಶ ಪಡೆದುಕೊಂಡ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುವ ಮೂಲಕ ನಗದು ಪುರಸ್ಕಾರದ ಚೆಕ್, ಪ್ರಮಾಣ ಪತ್ರ, ಕಾಲೇಜ್ ಬ್ಯಾಗ್ ನೀಡಿ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಗೌರವಿಸುತ್ತಿರುವ ಪ್ರತಿಷ್ಠಾನದ ಕಾರ್ಯ ಶ್ಲಾಘನೀಯ ಕಾರ್ಯ ಎಂದು ಬಣ್ಣಿಸಿದರು.

ಪ್ರತಿಭಾನ್ವಿತರಾದ ರಕ್ಷಿತಾ ಪರವಾನಗಿ, ರುಕೀಜಾ ಮುಲ್ಲಾ, ನಂದಿತಾ ಕನ್ಯಾಳ, ಪಲ್ಲವಿ ಕರಿಗಾರ, ಚೈತ್ರಾ ತೋಪಿನ ಅವರಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು. ಅಧ್ಯಕ್ಷತೆಯನ್ನು ಎಂ.ಎಸ್. ಮಕಾನದಾರ ವಹಿಸಿದ್ದರು. ವೇದಿಕೆಯ ಮೇಲೆ ಪ್ರತಿಷ್ಠಾನದ ಅಧ್ಯಕ್ಷ ಶಿವಕುಮಾರ ಎಚ್.ಪಾಟೀಲ, ಕಾರ್ಯದರ್ಶಿ ಸುಭಾಸಚಂದ್ರ ಬೆಟ್ಟದೂರ, ಶಿವಾನಂದ ಕತ್ತಿ, ಗಂಗಾಧರ ಮೇಲಗಿರಿ, ಮಹಾದೇವಪ್ಪ ಮಾದಣ್ಣವರ, ವಿನೋದ ಭಾಂಡಗೆ, ಭಾರತಿ ಪಾಟೀಲ, ನೇಹಾ, ಸುಧಾರಾಣಿ ಉಪಸ್ಥಿತರಿದ್ದರು.

ಪಿ.ಜಿ. ನಾಯಕ ಸ್ವಾಗತಿಸಿದರು, ಬಸಪ್ಪ ನೆರ್ತಿ ನಿರೂಪಿಸಿದರು. ಎನ್.ಎಚ್. ದೊಡ್ಡಗೌಡ್ರ ವಂದಿಸಿದರು.

ಯಲಿಶಿರೂರ: ಗದಗ ತಾಲೂಕಿನ ಯಲಿಶಿರೂರ ಗ್ರಾಮದ ದಂಡವ್ವ ನಾಗಪ್ಪ ಯಲಿ ಸರ್ಕಾರಿ ಪ್ರೌಢಶಾಲೆಯ ಪ್ರತಿಭಾನ್ವಿತ ವಿದ್ಯಾರ್ಥಿಗಳಾದ ರಂಜಿತಾ ಪಾಟೀಲ, ಗಾಯತ್ರಿ ಹುಲಕೋಟಿ, ಮೇಘಾ ವಗ್ಗರ, ಯಲ್ಲಪ್ಪ ಹುಲಕೋಟಿ, ನಾಗಲಕ್ಷ್ಮೀ ಜಂಗಮಠ ಅವರಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.

ಅಧ್ಯಕ್ಷತೆಯನ್ನು ಆರ್.ಎಸ್. ಜಲರಡ್ಡಿ ವಹಿಸಿದ್ದರು. ವೇದಿಕೆಯ ಮೇಲೆ ಡಾ. ಶರಣಬಸವ ಚೌಕಿಮಠ, ಪ್ರತಿಷ್ಠಾನದ ಅಧ್ಯಕ್ಷ ಶಿವಕುಮಾರ ಎಚ್.ಪಾಟೀಲ, ಕಾರ್ಯದರ್ಶಿ ಸುಭಾಸಚಂದ್ರ ಬೆಟ್ಟದೂರ, ಕೃಷ್ಣಾ ಈರಡ್ಡಿ, ಸೋಮಶೇಖರ ಯರಡ್ಡಿ, ಶಿವಾನಂದ ಕತ್ತಿ, ಜಿ.ಎಂ. ಫಿರಂಗಿ, ಭಾರತಿ ಪಾಟೀಲ, ನೇಹಾ, ಸುಧಾರಾಣಿ, ಶಹಬಾಜ್, ಗ್ರಾಮದ ಹಿರಿಯರಾದ ಹೊನ್ನಪ್ಪನವರ ಉಪಸ್ಥಿತರಿದ್ದರು. ಸೃಷ್ಟಿ ಶಿರಹಟ್ಟಿ ಪ್ರಾರ್ಥಿಸಿದರು, ಜಗದೀಶ ದಿನ್ನಿ ಸ್ವಾಗತಿಸಿದರು, ಜೆ.ಚಂದ್ರಶೇಖರ ನಿರೂಪಿಸಿದರು. ಎಸ್.ಕೆ. ಹಿರೇಮಠ ವಂದಿಸಿದರು.

ಶಿರುಂಜ ಗ್ರಾಮದ ಸರ್ಕಾರಿ ಹೆಣ್ಣು ಮಕ್ಕಳ ಪ್ರೌಢಶಾಲೆಯಲ್ಲಿ ಶಫಿ ನದಾಫ್, ಭೀಮಪ್ಪ ಹಿತ್ತಲಮನಿ, ಸುಮಾ ಕಂಬಳಿ, ಈಶ್ವರಯ್ಯ ಹಿರೇಮಠ, ಸೃಷ್ಠಿ ಗೌಳೇರ ಅವರಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು. ಅಧ್ಯಕ್ಷತೆಯನ್ನು ಪಾರ್ವತಿ ವಸ್ತ್ರದ ವಹಿಸಿದ್ದರು. ರವಿರಾಜ ಪವಾರ ಸ್ವಾಗತಿಸಿದರು, ದಿಲೀಪ ಜಮಾದಾರ ನಿರೂಪಿಸಿದರು. ಎಂ.ಎ. ಹಿರೇಮಠ ವಂದಿಸಿದರು.


Spread the love

LEAVE A REPLY

Please enter your comment!
Please enter your name here