HomeGadag Newsಹಳಗನ್ನಡ ಕಾವ್ಯದಲ್ಲಿ ಆಸಕ್ತಿ ಬೆಳೆಸಿಕೊಳ್ಳಿ

ಹಳಗನ್ನಡ ಕಾವ್ಯದಲ್ಲಿ ಆಸಕ್ತಿ ಬೆಳೆಸಿಕೊಳ್ಳಿ

For Dai;y Updates Join Our whatsapp Group

Spread the love

ವಿಜಯಸಾಕ್ಷಿ ಸುದ್ದಿ, ಗದಗ: ರೂಪಕ, ಲಯ, ಗತಿಯಿಂದ ಸಮೃದ್ಧವಾಗಿರುವ ಹಳಗನ್ನಡ ಕಾವ್ಯ ಓದುಗನಲ್ಲಿ ಕಾವ್ಯಾನುಭೂತಿಯನ್ನು ಒದಗಿಸುತ್ತದೆ. ರಾಘವಾಂಕ ಷಟ್ಪದಿಯಲ್ಲಿ ಕಾವ್ಯ ರಚಿಸಿ ಮುಂದಿನ ಕವಿಗಳಿಗೆ ದಾರಿ ತೋರಿದನು. ನಾಡಿನ ಶ್ರೇಷ್ಠ ಕವಿಗಳೆಲ್ಲರೂ ಹಳಗನ್ನಡ ಕವಿಗಳಿಂದ ಪ್ರಭಾವಿತರಾಗಿದ್ದಾರೆ. ಈ ಕುರಿತು ಇಂದಿನ ಪೀಳಿಗೆಯಲ್ಲಿ ಆಸಕ್ತಿಯನ್ನು ಹುಟ್ಟಿಸುವ ಕಾರ್ಯ ನಡೆಯಬೇಕಿದೆ ಎಂದು ಹಿರಿಯ ಸಾಹಿತಿ ಪ್ರೊ. ಚಂದ್ರಶೇಖರ ವಸ್ತ್ರದ ತಿಳಿಸಿದರು.

ಅವರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಜರುಗಿದ ಕಾರ್ಯಕ್ರಮದಲ್ಲಿ ಸಾವಿತ್ರವ್ವ ಹಟ್ಟಿ ರಚಿಸಿದ `ಭಾಮಿನಿ ಕೀರ್ತನೆಗಳು’ ಪುಸ್ತಕವನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದರು.

ಸಾವಿತ್ರಮ್ಮ ಹಟ್ಟಿ ಅವರು ಷಟ್ಪದಿ ಶೈಲಿಯಲ್ಲಿ ಕಾವ್ಯ ರಚಿಸಿದ ಜಿಲ್ಲೆಯ ಈ ದಿನಮಾನದ ಮೊದಲ ಕವಯಿತ್ರಿಯಾಗಿದ್ದಾರೆ. ಈ ಕುರಿತು ಅಧ್ಯಯನ ಮತ್ತು ಪ್ರಯತ್ನದ ಮೂಲಕ ಇನ್ನೂ ಅನೇಕ ಕೃತಿಗಳನ್ನು ರಚಿಸಲಿ ಎಂದರು.

ಪುಸ್ತಕವನ್ನು ಪರಿಚಯಿಸಿದ ಅಕ್ಕಮಹಾದೇವಿ ಹಾರೋಗೇರಿ, ಈ ಕೃತಿಯಲ್ಲಿ 24 ಆತ್ಮಾನುಸಂಧಾನ ಹಾಗೂ ಸಾಮಾಜಿಕ ಕೀರ್ತನೆಗಳನ್ನು ಕಾಣಬಹುದು. ದೇಶಭಕ್ತಿ, ದೈವಭಕ್ತಿ, ಸಾಮಾಜಿಕ ಕಳಕಳಿ, ಸ್ತ್ರೀ ಸಂವೇದನೆಯ ಅಂಶಗಳನ್ನು ಇಲ್ಲಿಯ ಕೀರ್ತನೆಗಳು ಒಳಗೊಂಡಿವೆ ಎಂದು ತಿಳಿಸಿದರು.

ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಅಕ್ಷರ ದಾಸೋಹದ ಸಹಾಯಕ ನಿರ್ದೇಶಕ ಶಂಕರ ಹಡಗಲಿ ಮಾತನಾಡಿ, ಹಳಗನ್ನಡ ಕಾವ್ಯದ ಬಗ್ಗೆ ಇಂದಿನ ಪೀಳಿಗೆ ಆಸಕ್ತಿ ತೋರುತ್ತಿಲ್ಲ. ಇದಕ್ಕೆ ಮುಖ್ಯ ಕಾರಣ ಪರಿಣಾಮಕಾರಿಯಾಗಿ ಪ್ರಸ್ತುತಪಡಿಸುವ ಬೋಧಕ ವರ್ಗದ ಕೊರತೆ. ನಮ್ಮ ಕಾವ್ಯ ಪರಂಪರೆಯನ್ನು ಅರಿಯಬೇಕಾದುದು ನಮ್ಮ ಅಗತ್ಯವಾಗಬೇಕೆಂದು ತಿಳಿಸಿದರು.

ಶಶಿಕಲಾ ಪಾಟೀಲ, ಶಕುಂತಲಾ ಸಿಂಧೂರ ಮಾತನಾಡಿದರು. ಕಿಶೋರಬಾಬು ನಾಗರಕಟ್ಟಿ ಸ್ವಾಗತಿಸಿದರು. ಪ್ರೇಮಾ ವೀರೇಶ ನಿರೂಪಿಸಿದರು. ರವಿ ದೇವರಡ್ಡಿ ವಂದಿಸಿದರು.

ಕಾರ್ಯಕ್ರಮದಲ್ಲಿ ಅನ್ನದಾನಿ ಹಿರೇಮಠ, ಬಸವರಾಜ ಗಿರಿತಿಮ್ಮಣ್ಣವರ, ರತ್ನಕ್ಕ ಪಾಟೀಲ, ಬಸವರಾಜ ಗಣಪ್ಪನವರ, ಸತೀಶ ಚನ್ನಪ್ಪಗೌಡ್ರ, ಬಿ.ಎಸ್. ಹಿಂಡಿ, ಅಮರೇಶ ರಾಂಪೂರ, ಡಿ.ಎಸ್. ಬಾಪುರಿ, ಶಕುಂತಲಾ ಗಿಡ್ನಂದಿ, ರಾಹುಲ ಗಿಡ್ನಂದಿ, ಶಶಿಕಾಂತ ಕೊರ್ಲಹಳ್ಳಿ, ಬಸವರಾಜ ವಾರಿ, ಭಾಗ್ಯಶ್ರೀ ಹುರಕಡ್ಲಿ, ಅಶೋಕ ಸತ್ಯರಡ್ಡಿ, ಸಿ.ಎಂ. ಮಾರನಬಸರಿ, ಮಹೇಶ ಶಟವಾಜಿ, ಎಸ್.ಎಂ. ಕಾತರಕಿ, ಶೇಖರಪ್ಪ ಕಳಸಾಪೂರಶೆಟ್ರ, ಬಸವರಾಜ ನೆಲಜೇರಿ, ರತ್ನಾಬಾಯಿ ಪುರಂತರ, ಸುರೇಶ ಕುಂಬಾರ, ಬಿ.ಬಿ. ಹೊಳಗುಂದಿ, ಮಾಲತಿ ಕೊಪ್ಪಳ, ಎಂ.ಸಿ. ದೊಡ್ಡಮನಿ, ರಮೇಶ ಲಮಾಣಿ, ಡಿ.ಸಿ. ಪ್ರಭಾಕರ, ಪ್ರಕಾಶ ನೋಟಗಾರ, ಶಿವಕುಮಾರ ಪತ್ರಿಮಠ, ಬಿ.ಬಿ. ಹೊಳಗುಂದಿ, ಅಶೋಕ ಸತ್ಯರಡ್ಡಿ, ಅಶೋಕ ಹಾದಿ, ಅಂದಯ್ಯ ಅರವಟಗಿಮಠ, ವಿಷ್ಣು ಹಟ್ಟಿ, ಯಲ್ಲಪ್ಪ ಹಂದ್ರಾಳ, ಕೃಷ್ಣಾ ಕಡಿಯವರ, ಬಸವರಾಜ ನೆಲಜೇರಿ, ಹೇಮಾವತಿ ಕಣವಿ, ಪ್ರಮೀಳಾ ಸವಡಿ, ಶ್ವೇತಾ ಉಪ್ಪಿನ, ರೇಣುಕಾ ದಾಸರ, ಜ್ಯೋತಿ ಎಸರಗಿ, ವಿಶ್ವನಾಥ ಗವಾಯಿ, ಎಸ್.ಯು. ಸಜ್ಜನಶೆಟ್ಟರ ಮೊದಲಾದವರು ಭಾಗವಹಿಸಿದ್ದರು.

ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಕಸಾಪ ಅಧ್ಯಕ್ಷ ವಿವೇಕಾನಂದಗೌಡ ಪಾಟೀಲ ಮಾತನಾಡಿ, ಪ್ರಾರಂಭದಲ್ಲಿ ಕವಿತೆ ಪ್ರೀತಿ, ಪ್ರೇಮ, ಪ್ರಣಯಗಳ ಸುತ್ತ ಸುತ್ತುವ ಈ ಸಂದರ್ಭದಲ್ಲಿ ಸಾವಿತ್ರವ್ವ ಹಟ್ಟಿ ಅವರು ಷಟ್ಪದಿಯಲ್ಲಿ ಕಾವ್ಯ ರಚಿಸುವ ಮೂಲಕ ಹೊಸ ತಲೆಮಾರಿನ ಬರಹಗಾರರಿಗೆ ಮಾದರಿಯಾಗಿದ್ದಾರೆ. ಜಿಲ್ಲೆಯ ಭರವಸೆಯ ಕವಿಯಾಗಿ ಹೊರಹೊಮ್ಮಿದ್ದಾರೆ ಎಂದು ತಿಳಿಸಿದರು.


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!