ವಿಜಯಸಾಕ್ಷಿ ಸುದ್ದಿ, ಗದಗ: ವಿಜಯ ಲಲಿತಾ ಕಲಾ ಸಂಸ್ಥೆಯ ವಿಜಯ ಪ್ರಾಥಮಿಕ ಶಾಲೆ, ವಿಜಯ ವಾಣಿಜ್ಯ ಪದವಿಪೂರ್ವ ವಿದ್ಯಾಲಯಗಳಲ್ಲಿ ಗುರುಪೂರ್ಣಿಮ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಸಂಸ್ಥೆಯ ಅಧ್ಯಕ್ಷ ಅಶೋಕ ಅಕ್ಕಿ ಮಾತಾನಾಡಿ, ವಿದ್ಯಾರ್ಥಿಗಳು ಮೊಬೈಲ್ ಬಳಕೆ ಕಡಿಮೆ ಮಾಡಬೇಕು. ಏಕಾಗ್ರತೆಯಿಂದ ಪುಸ್ತಕ ಓದುವ ಮತ್ತು ವಿವಿಧ ಹವ್ಯಾಸಗಳನ್ನು ಬೆಳೆಸಿಕೊಳ್ಳಬೇಕು ಎಂದರು.
ಸAಸ್ಥೆಯ ಕಾರ್ಯದರ್ಶಿ ಸಂತೋಷ ಅಕ್ಕಿ ಮಾತನಾಡಿ, ಸನಾತನ ಕಾಲದಲ್ಲಿ ಗುರು-ಶಿಷ್ಯ ಪರಂಪರೆಯ ಬಗ್ಗೆ ಮತ್ತು ಹಿಂದಿನ ಗುರುಕುಲ ಪದ್ಧತಿ, ಈಗಿನ ಶೈಕ್ಷಣಿಕ ಪದ್ಧತಿಗಳನ್ನು ವಿವರಿಸಿದರು. ಸಾಗರಿಕಾ. ಎಸ್ ಅಕ್ಕಿ ಹಾಗೂ ಪದವಿ ಮಹಾವಿದ್ಯಾಲಯದ ಡಾ. ಸಿ.ವಿ. ಬಡಿಗೇರ, ಪೂರ್ವ ಪದವಿ ಮಹಾವಿದ್ಯಾಲಯದ ಶಿಲ್ಪಾ ಮಲ್ಲಾಪೂರ, ಪೂರ್ವ ಪ್ರಾಥಮಿಕ ಮುಖ್ಯೋಪಾಧ್ಯಾಯೆ ರೇಖಾ ಮಲೇಕರ್, ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯೆ ಭಾಗ್ಯಲಕ್ಷ್ಮೀ ಶೇಷಗಿರಿ ಮತ್ತು ಸಂಸ್ಥೆಯ ಸಿಬ್ಬಂದಿಯವರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಪ್ರೊ. ರವಿಚಂದ್ರ ಸ್ವಾಗತಿಸಿದರು. ಪ್ರೊ. ವೀರೇಶ ಬನಿಕಟ್ಟಿ ನಿರೂಪಿಸಿದರು. ಪ್ರೊ. ಅರುಣಕುಮಾರ ವಂದಿಸಿದರು.