ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ : ಪಟ್ಟಣದ ಸವಣೂರು ರಸ್ತೆಯ ಶ್ರೀ ಸುಬ್ರಮಣ್ಯ ದೇವಸ್ಥಾನದ ಹತ್ತಿರವಿರುವ ಉಪನಾಳ ಪಾರ್ಕ್ ಬಡಾವಣೆಯು ಮೂಲಭೂತ ಸೌಲಭ್ಯಗಳಿಂದ ವಂಚಿತವಾಗಿದ್ದು, ಹಲವಾರು ವರ್ಷಗಳಿಂದ ರಸ್ತೆ, ಚರಂಡಿಗಳಿಲ್ಲದೆ ಇಲ್ಲಿನ ನಿವಾಸಿಗಳು ಪರದಾಡುವಚಿತಾಗಿದೆ. ಪುರಸಭೆಯ ಅನುದಾನದಲ್ಲಿ ಈ ಬಡಾವಣೆಯ ರಸ್ತೆಗಳನ್ನು ಅಭಿವೃದ್ಧಿಪಡಿಸುವಂತೆ ಆಗ್ರಹಿಸಿ ಸ್ಥಳೀಯ ನಿವಾಸಿಗಳು ಸೋಮವಾರ ಪುರಸಭೆ ಅಧ್ಯಕ್ಷರಿಗೆ ಮನವಿ ಅರ್ಪಿಸಿದರು.
ಈ ಬಡಾವಣೆಯಲ್ಲಿ ಹಲವಾರು ವರ್ಷಗಳಿಂದ ರಸ್ತೆ, ಬೀದಿ ದೀಪ, ಚರಂಡಿ ಸೇರಿದಂತೆ ಯಾವುದೇ ಸೌಲಭ್ಯಗಳು ದೊರೆಯದೆ ನಿವಾಸಿಗಳು ಪರದಾಡುತ್ತಿದ್ದಾರೆ. ಪುರಸಭೆಯಿಂದ ಯಾವುದೇ ಅಭಿವೃದ್ಧಿ ಕಾರ್ಯಗಳು ಇಲ್ಲಿ ನಡೆದಿಲ್ಲ. ಅದಕ್ಕಾಗಿ ಕೂಡಲೇ ಇಲ್ಲಿನ ಬಡಾವಣೆ ಅಭಿವೃದ್ಧಿಗೆ ಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡಿದರು.
ಉಪನಾಳ ಪಾರ್ಕ್ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಟೆಂಡರ್ ಕರೆಯಲಾಗಿದೆ. ಈ ಕಾಮಗಾರಿಯನ್ನು ಬೇರೆ ಕಡೆ ಸ್ಥಳಾಂತರಿಸದೆ ಉಪನಾಳ ಪಾರ್ಕ್ ಅಭಿವೃದ್ಧಿಗೆ ವಿನಿಯೋಗಿಸಬೇಕೆಂದು ಮನವಿ ಮಾಡುವದಾಗಿ ಹೇಳಿದರು.
ಮನವಿ ಸ್ವೀಕರಿಸಿದ ಅಧ್ಯಕ್ಷ-ಉಪಾಧ್ಯಕ್ಷರು ಸಭೆಯಲ್ಲಿ ಚರ್ಚಿಸಿ ಸೂಕ್ತ ನಿರ್ಣಯ ಕೈಗೊಳ್ಳುವದಾಗಿ ಭರವಸೆ ನೀಡಿದರು. ಈ ಸಂದರ್ಭದಲ್ಲಿ ಎಸ್.ಡಿ. ತಿರಕಪ್ಪನವರ, ಆರ್.ಎಫ್. ರಿತ್ತಿ, ಜೆ.ವಿ. ಅರಳಿಕಟ್ಟಿ, ಎ.ಎಸ್. ರಾಯಣ್ಣವರ, ಜಿ.ಜಿ. ಹುರಕನವರ, ಎಸ್.ಆರ್. ರಿತ್ತಿ, ಆರ್.ಇ. ಬಾಕಳೆ, ಆರ್.ಡಿ. ನಾಯಕ್, ಎಂ.ಡಿ. ಹುಬ್ಬಳ್ಳಿ, ಎಂ.ಬಿ. ಸಂಗನಪೇಟ, ಕೆ.ಬಿ. ಘಂಟಿ, ಬಸಪ್ಪ ಕುರಿ, ಎನ್.ಡಿ. ಸೂರಣಗಿ, ಮಲ್ಲಿಕಾರ್ಜುನ, ಅಶೋಕ ಕಲ್ಲಣ್ಣವರ, ಎಂ.ಎಸ್. ಮಳಿಮಠ, ಪಿ.ಪಿ. ಚಲುವಾದಿ, ಬಿ.ಎಫ್. ಶಿರೂರ ಮುಂತಾದವರಿದ್ದರು.