ಸಮಾನತೆಯ ಸಮಾಜದಿಂದ ದೇಶದ ಅಭಿವೃದ್ಧಿ

0
Spread the love

ವಿಜಯಸಾಕ್ಷಿ ಸುದ್ದಿ, ಗದಗ; ಬಸವಾದಿ ಶರಣರು 12ನೇ ಶತಮಾನದಲ್ಲಿಯೇ ಮಹಿಳೆಯರಿಗೆ ಸ್ವಾತಂತ್ರ್ಯ ನೀಡಿದರೂ ಇಂದಿಗೂ ಆಕೆ ಅನೇಕ ಸೌಲಭ್ಯಗಳಿಂದ ವಂಚಿತಳಾಗಿದ್ದಾಳೆ. ಆದರ್ಶ, ಮೌಲ್ಯಗಳನ್ನು ಮಹಿಳೆಯರಿಗಷ್ಟೇ ಸೀಮಿತಗೊಳಿಸಲಾಗಿದೆ. ಪೂಜ್ಯನೀಯ ಸ್ಥಾನ ನೀಡಿ ಗೃಹಬಂಧನದಲ್ಲಿರಿಸಲಾಗಿದೆ. ಆದಾಗ್ಯೂ ಸಿಕ್ಕ ಅವಕಾಶಗಳನ್ನು ಸಮರ್ಥವಾಗಿ ಬಳಸಿಕೊಂಡು ತಮ್ಮ ಸಾಮರ್ಥ್ಯವನ್ನು ಸಾಧಿಸಿ ತೋರಿಸಿದ್ದಾಳೆ ಎಂದು ವಿಜಯಲಕ್ಷ್ಮಿ ಕೋಟಿ ಅಭಿಪ್ರಾಯಪಟ್ಟರು.

Advertisement

ಅವರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನಿಂದ ಗದುಗಿನ ತೋಂಟದ ಸಿದ್ಧಲಿಂಗಶ್ರೀಗಳ ಕನ್ನಡ ಭವನದಲ್ಲಿ ಶಶಿಕಲಾ ಶಂಕರಗೌಡ ಪಾಟೀಲ ಹಾಗೂ ಪಾರ್ವತಿ ಚಂದ್ರಶೇಖರ ಹನುಮಸಾಗರ ಇವರ ಸ್ಮರಣಾರ್ಥ ಜರುಗಿದ ದತ್ತಿ ಕಾರ್ಯಕ್ರಮದಲ್ಲಿ ಮಹಿಳೆ ಎದುರಿಸುತ್ತಿರುವ ಸಮಸ್ಯೆಗಳ ಕುರಿತು ಉಪನ್ಯಾಸ ನೀಡಿ ಮಾತನಾಡಿದರು.

ಸಾಮಾಜಿಕವಾಗಿ, ರಾಜಕೀಯವಾಗಿ ಮತ್ತು ಆರ್ಥಿಕವಾಗಿ ಮಹಿಳೆ ಸಬಲೀಕರಣಗೊಂಡಾಗ ಮಾತ್ರ ಸಮಾನತೆ ನೆಲೆಗೊಳ್ಳಲು ಸಾಧ್ಯವಾಗುತ್ತದೆ. ಇದಕ್ಕೆ ಶಿಕ್ಷಣವೊಂದೇ ಮಾರ್ಗವಾಗಿದೆ. ಶೋಷಣೆಮುಕ್ತ, ಸಮಾನತೆಯಿಚಿದ ಕೂಡಿದ ಸಮಾಜದಿಂದ ಮಾತ್ರ ದೇಶದ ಅಭಿವೃದ್ಧಿ ಎಂದು ತಿಳಿಸಿದರು.

ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಕಸಾಪ ಅಧ್ಯಕ್ಷ ವಿವೇಕಾನಂದಗೌಡ ಪಾಟೀಲ ಮಾತನಾಡಿ, ಬುದ್ಧಿಶಕ್ತಿ, ಕೌಶಲ್ಯದ ದೃಷ್ಟಿಯಿಂದ ಮಹಿಳೆ ಪುರುಷನಿಗಿಂತ ಮುಂದಿದ್ದಾಳೆ. ಶಿಕ್ಷಣದ ಅವಕಾಶಗಳು ಪೂರ್ಣ ಪ್ರಮಾಣದಲ್ಲಿ ದೊರೆತಾಗ ಮಾತ್ರ ಪ್ರತಿಫಲ ದೊರೆಯುತ್ತದೆ. ಸಾಮಾಜಿಕ ತಾರತಮ್ಯವನ್ನು ನಿವಾರಿಸುವ ನಿಟ್ಟಿನಲ್ಲಿ ಪುರುಷ ಪ್ರಧಾನ ವ್ಯವಸ್ಥೆ ಪ್ರಜ್ಞಾಪೂರ್ವಕವಾಗಿ ಕಾರ್ಯ ನಿರ್ವಹಿಸಬೇಕು ಎಂದು ತಿಳಿಸಿದರು.

ಶಶಿಕಲಾ ಶಂಕರಗೌಡ ಪಾಟೀಲ ಸ್ಮರಣಾರ್ಥ ದತ್ತಿ ಪ್ರಶಸ್ತಿಯನ್ನು ಬಸವತತ್ವ ಚಿಂತಕರು ಹಾಗೂ ಪ್ರಸಾರಕರಾದ ಶರಣೆ ಗಿರಿಜಕ್ಕ ಧರ್ಮರೆಡ್ಡಿ ಅವರಿಗೆ ಹಾಗೂ ರಂಗಭೂಮಿಯ ಹಿರಿಯ ಕಲಾವಿದೆಯಾದ ಗಾಯತ್ರಿ ಎಸ್.ಹಿರೇಮಠರಿಗೆ ನೀಡಿ ಗೌರವಿಸಲಾಯಿತು. ಇದೇ ಸಂದರ್ಭದಲ್ಲಿ ಭಾರತಿ ಮೋಹನ ಕೋಟಿ ಅವರು ತಂದೆ ಶಾಂತರಸರ ಸ್ಮರಣಾರ್ಥ ದತ್ತಿಯನ್ನು ಸ್ಥಾಪಿಸಿದರು.

ಶಿಲ್ಪಾ ಕುರಹಟ್ಟಿ ಮಹಿಳಾ ಪರ ಗೀತೆಗಳನ್ನು ಪ್ರಸ್ತುತಪಡಿಸಿದರು. ಮಂಜುಳಾ ವೆಂಕಟೇಶಯ್ಯ ಪರಿಚಯಿಸಿದರು. ಜಯಶ್ರೀ ಅಂಗಡಿ ನಿರೂಪಿಸಿದರು. ಡಾ. ರಶ್ಮಿ ಅಂಗಡಿ ಸ್ವಾಗತಿಸಿದರು. ಭಾಗ್ಯಶ್ರೀ ಹುರಕಡ್ಲಿ ವಂದಿಸಿದರು.

ಕಾರ್ಯಕ್ರಮದಲ್ಲಿ ಕಿಶೋರಬಾಬು ನಾಗರಕಟ್ಟಿ, ಡಿ.ಎಸ್. ಬಾಪುರಿ, ಸರ್ವಮಂಗಳಾ ಗುಜಮಾಗಡಿ, ಉಮಾದೇವಿ ಕಣವಿ, ಭಾರತಿ ಮೋಹನ ಕೋಟಿ, ರಾಜೇಶ್ವರ ಬಡ್ನಿ, ಶೈಲಶ್ರೀ ಕಪ್ಪರದ, ಶ್ರೇಯಾ ಪಾಟೀಲ, ವೀರಣ್ಣ ಗುಜಮಾಗಡಿ, ಡಾ. ಜಿ.ಬಿ. ಪಾಟೀಲ, ಡಾ. ರಾಜಶೇಖರದಾನರಡ್ಡಿ, ಬಿ.ಬಿ. ಪಾಟೀಲ, ಪರಮೇಶ್ವರ ಐರಣಿ, ಬಸವರಾಜ ಗಣಪ್ಪನವರ, ಬಸವರಾಜ ವಾರಿ, ರಾಚಪ್ಪಕುಪ್ಪಸದ, ಚನ್ನವೀರಪ್ಪ ದುಂದೂರ, ಬಸವರಾಜ ಗಿರಿತಿಮ್ಮಣ್ಣವರ, ಡಾ. ಬಿ.ಬಿ. ಹೊಳಗುಂದಿ, ಸಿ.ಎಂ. ಮಾರನಬಸರಿ, ಜಗನ್ನಾಥ ಟೀಕಾಂದಾರ, ತಯ್ಯಬಲಿ ಹೊಂಬಳ, ಎಚ್.ಟಿ. ಸಂಜೀವಸ್ವಾಮಿ, ಬಿ.ಎಸ್. ಹಿಂಡಿ, ಯಲ್ಲಪ್ಪ ಹಂದ್ರಾಳ, ಡಿ.ಜಿ. ಕುಲಕರ್ಣಿ, ಎಸ್.ಐ. ಬಾಣದ, ಸುಶಾಂತೆ ನೀಲಗುಂದ, ಕೆ.ಜೆ. ಹೊನ್ನಾದೇವಿ, ಶಿವಪುತ್ರವ್ವ ಕಣವಿ, ನೀಲಮ್ಮಅಂಗಡಿ, ಅನಸೂಯಾ ಮಿಟ್ಟಿ, ರೇಣುಕಾ ಪಿ., ಎಂ.ಎಫ್. ಡೋಣಿ, ಕೆ.ಜಿ. ವ್ಯಾಪಾರಿ, ಪ್ರಸಾದ ವ್ಯಾಪಾರಿ, ಎ.ಎಸ್. ಮಕಾನದಾರ, ಬಿ.ಎನ್. ಅಂಗಡಿ, ಪ್ರ.ತೋ. ನಾರಾಯಣಪೂರ, ದಿಲೀಪಕುಮಾರ ಮುಗಳಿ, ಪ್ರೇಮಾ ಹಟ್ಟಿ, ಶಿವಗಂಗಾ ಕುದರಿ, ರಮೇಶ ಲಮಾಣಿ, ಲೋಕೇಶ ಅಮಾಗಿ, ಸತೀಶ ಚನ್ನಪ್ಪಗೌಡರ, ಅಮರೇಶ ರಾಂಪೂರ, ಎಂ.ಸಿ. ದೊಡ್ಡಮನಿ, ಅಕ್ಕಮಹಾದೇವಿ ಕಮತ, ಎಸ್.ಎಂ. ಪಾಟೀಲ ಮೊದಲಾದವರು ಉಪಸ್ಥಿತರಿದ್ದರು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಜಯಶ್ರೀ ತಾತನಗೌಡ ಪಾಟೀಲ, ಮಹಿಳೆ ತನ್ನ ಹಕ್ಕುಗಳಿಗಾಗಿ ಹೋರಾಟ ಮಾಡಿದ ದಿನವಿದು. ಇಂದು ಅನೇಕ ಕಾನೂನುಗಳು ಮಹಿಳೆಯರ ಪರವಾಗಿದ್ದರೂ ಮಾನವೀಯತೆಯ ನೆಲೆಯ ಮೇಲೆ ಸಮಾನ ಅವಕಾಶಗಳನ್ನು ನೀಡಬೇಕು. ತಾರತಮ್ಯದಿಂದ ಕೂಡಿದ ಸಮಾಜದಿಂದ ಪ್ರಗತಿ ಸಾಧ್ಯವಿಲ್ಲ. ಮನೆಯಲ್ಲಿ ಪೋಷಕರು ಮಕ್ಕಳನ್ನು ಬೆಳೆಸುವಾಗಲೇ ಸಮಾನತೆಯ ಬೀಜವನ್ನು ಬಿತ್ತಬೇಕು ಎಂದು ತಿಳಿಸಿದರು.


Spread the love

LEAVE A REPLY

Please enter your comment!
Please enter your name here