ವಿಜಯಸಾಕ್ಷಿ ಸುದ್ದಿ, ಗದಗ: ಮುಂಡರಗಿ ಕಾರ್ಯನಿರ್ವಾಹಕ ಅಧಿಕಾರಿಗಳು, ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳ ನಿರ್ಲಕ್ಷ್ಯದ ಕುರಿತು ಗದಗ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣದ ಗದಗ ಜಿಲ್ಲಾಧ್ಯಕ್ಷ ಗವಿಸಿದ್ದಪ್ಪ ಎಸ್.ಹ್ಯಾಟಿ ನೇತೃತ್ವದಲ್ಲಿ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಗವಿಸಿದ್ದಪ್ಪ ಹ್ಯಾಟಿ ಮಾತನಾಡಿ, ಮುಂಡರಗಿಯAತಹ ಹಿಂದುಳಿದ ಪ್ರದೇಶಕ್ಕೆ ಬರುವ ಅಧಿಕಾರಿಗಳು ಅಭಿವೃದ್ಧಿ ಕಡೆಗೆ ಗಮನ ಕೊಡದೆ ತಮಗೆ ಬೇಕಾದಾಗ, ಬೇಕಾದ ರೀತಿಯಲ್ಲಿ ಬಂದು, ಸಭೆ ಮಾಡಿ ತೆರಳುತ್ತಾರೆ. ಆದರೆ ಗ್ರಾಮೀಣ ಭಾಗದಲ್ಲಿನ ಜನ ಸಾಮಾನ್ಯರ ಗೋಳು ಕೇಳುವವರು ಯಾರೂ ಇಲ್ಲದಂತಾಗಿದೆ. ಮುಂಡರಗಿ ತಾಲೂಕಿನಲ್ಲಿ ಒಟ್ಟು 19 ಗ್ರಾಮ ಪಂಚಾಯಿತಿಗಳಿದ್ದು, ಅಭಿವೃದ್ಧಿ ಕಾರ್ಯಗಳು ಶೂನ್ಯ ಎಂದು ಆರೋಪಿಸಿದರು.
ಹಾಲಪ್ಪ ಅರಹುಣಸಿ ಮಾತನಾಡಿ, ಮುಂಡರಗಿ ತಾಲೂಕು ಕಚೇರಿಯಲ್ಲಿರುವ ಮಹಾತ್ಮ ಗಾಂಧೀಜಿ ಮೂರ್ತಿಯು ಮೂರು ವರ್ಷದಿಂದ ಬಣ್ಣದಿಂದ ವಿರೂಪಗೊಂಡಿದ್ದು, ಅದೇ ಮೂರ್ತಿಗೆ ಹಾರ ಹಾಕಿ ಗಾಂಧಿ ಜಯಂತಿಯನ್ನು ಆಚರಿಸಿದ್ದಾರೆ. ಇದು ರಾಷ್ಟçಪಿತನಿಗೆ ಮಾಡಿದ ಅವಮಾನವಾಗಿದ್ದು, ಇದು ಶಿಕ್ಷಾರ್ಹ ಅಪರಾಧವಾಗಿರುತ್ತದೆ. ಈ ಬಗ್ಗೆ ಯೋಗ್ಯ ಕ್ರಮ ತೆಗೆದುಕೊಳ್ಳಬೇಕು ಎಂದರು.
ಈ ಸಂದರ್ಭದಲ್ಲಿ ತಿಪ್ಪಣ್ಣ ಕಟ್ಟಿಮನಿ, ಶ್ರೀಧರ ಕೋಮಾಲಾಪುರ, ಶಿರಹಟ್ಟಿ, ಶ್ರೀನಿವಾಸ ಪ. ಕೊರ್ಲಗಡ್ಡಿ, ಕೃಷ್ಣಾ ಚಿ.ಗವಿಯಪ್ಪನವರ, ಎಸ್.ಎಚ್. ಶಿವಶಿಂಪಗೇರ, ಮಾಬುಸಾಬ ಢಾಲಾಯತ ಉಪಸ್ಥಿತರಿದ್ದರು.