ಡಿಸೆಂಬರ್ 11ರಂದು ತೆರೆಗೆ ಬಂದ ದರ್ಶನ್ ಅಭಿನಯದ ‘ದಿ ಡೆವಿಲ್’ ಸಿನಿಮಾ ಅಭಿಮಾನಿಗಳಲ್ಲಿ ಭಾರಿ ಕುತೂಹಲ ಮೂಡಿಸಿದೆ. ಚಿತ್ರದಲ್ಲಿ ದರ್ಶನ್ ಅವರು ಒಳ್ಳೆಯ ಹಾಗೂ ಕೆಟ್ಟ ಪಾತ್ರಗಳಲ್ಲಿ ಡಬಲ್ ಶೇಡ್ನಲ್ಲಿ ಕಾಣಿಸಿಕೊಂಡಿದ್ದು, ಇದು ಫ್ಯಾನ್ಸ್ಗೆ ದೊಡ್ಡ ಪ್ಲಸ್ ಆಗಿದೆ.
ಈ ನಡುವೆ, ‘ದಿ ಡೆವಿಲ್’ ಸಿನಿಮಾಗೆ ಸಂಬಂಧಿಸಿದಂತೆ ನೆಗೆಟಿವ್ ಪ್ರಚಾರದ ವಿರುದ್ಧ ಚಿತ್ರತಂಡ ಕಠಿಣ ಹೆಜ್ಜೆ ಇಟ್ಟಿದೆ. ‘ಶ್ರೀ ಜೈಮಾ ಕಂಬೈನ್ಸ್’ ನಿರ್ಮಾಣದ ಈ ಚಿತ್ರವನ್ನು ನಿರ್ದೇಶಕ ಮಿಲನ ಪ್ರಕಾಶ್ ನಿರ್ದೇಶನ ಮಾಡಿದ್ದಾರೆ. ಕೆಲವರು ಉದ್ದೇಶಪೂರ್ವಕವಾಗಿ ಚಿತ್ರದ ಬಗ್ಗೆ ನೆಗೆಟಿವ್ ಬರಹಗಳು ಮತ್ತು ರೇಟಿಂಗ್ಗಳನ್ನು ಮಾಡುತ್ತಿದ್ದಾರೆ ಎಂಬ ಆರೋಪದ ಹಿನ್ನೆಲೆಯಲ್ಲಿ ಚಿತ್ರತಂಡ ಕೋರ್ಟ್ ಮೆಟ್ಟಿಲೇರಿದೆ.
ಕೋರ್ಟ್ ನೀಡಿರುವ ಆದೇಶದಂತೆ,
ಚಿತ್ರದ ವಿರುದ್ಧ ಅವಹೇಳನಕಾರಿ, ಮಾನಹಾನಿಕರ ಅಥವಾ ಅಪಪ್ರಚಾರಾತ್ಮಕ ವಿಮರ್ಶೆಗಳನ್ನು ಯಾವುದೇ ಮಾಧ್ಯಮ, ಸೋಶಿಯಲ್ ಮೀಡಿಯಾ ಖಾತೆ ಅಥವಾ ಪ್ಲಾಟ್ಫಾರ್ಮ್ನಲ್ಲಿ ಪ್ರಕಟಿಸುವಂತಿಲ್ಲ.
ಇಂತಹ ವಿಷಯಗಳನ್ನು ಪ್ರಕಟಿಸಿದರೆ ಅಥವಾ ಈಗಾಗಲೇ ಪ್ರಕಟಿಸಿದ್ದನ್ನು ತೆಗೆದುಹಾಕದೇ ಇದ್ದರೆ,
ಸಂಬಂಧಪಟ್ಟ ವ್ಯಕ್ತಿಗಳು ಮತ್ತು ಸಂಸ್ಥೆಗಳ ವಿರುದ್ಧ ಸಿವಿಲ್ ಹಾಗೂ ಕ್ರಿಮಿನಲ್ ಕೇಸ್ ದಾಖಲಿಸಿ ಕಠಿಣ ಕಾನೂನು ಕ್ರಮ ಕೈಗೊಳ್ಳಬಹುದು, ಅಗತ್ಯವಿದ್ದರೆ ಬಂಧನವೂ ಸಂಭವಿಸಬಹುದು ಎಂದು ಕೋರ್ಟ್ ಎಚ್ಚರಿಕೆ ನೀಡಿದೆ.
ಇನ್ನು ಚಿತ್ರದ ಕಲೆಕ್ಷನ್ ಬಗ್ಗೆ ಚಿತ್ರತಂಡ ಯಾವುದೇ ಅಧಿಕೃತ ಘೋಷಣೆ ಮಾಡದಿದ್ದರೂ, ದರ್ಶನ್ ಅವರ ಡಬಲ್ ಶೇಡ್ ಪಾತ್ರಗಳು ಅಭಿಮಾನಿಗಳಿಗೆ ಭಾರಿ ಇಂಪ್ರೆಶನ್ ನೀಡಿವೆ. ಒಂದೇ ಚಿತ್ರದಲ್ಲಿ ಎರಡು ವಿಭಿನ್ನ ಮುಖಗಳನ್ನು ನೋಡಿದ ಫ್ಯಾನ್ಸ್ ಸಿನಿಮಾ ಬಗ್ಗೆ ಪಾಸಿಟಿವ್ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.



