ಕನ್ನಡ ಚಿತ್ರರಂಗದಲ್ಲಿ ಬಹು ನಿರೀಕ್ಷೆಯೊಂದಿಗೆ ತೆರೆಗೆ ಬಂದ ದರ್ಶನ್ ಅಭಿನಯದ ‘ಡೆವಿಲ್’ ಸಿನಿಮಾ ಬಾಕ್ಸ್‌ಆಫೀಸ್‌ನಲ್ಲಿ ನಿಧಾನಗತಿಯಲ್ಲಿ ಸಾಗುತ್ತಿದೆ. ದ್ವಿಪಾತ್ರದಲ್ಲಿ ದರ್ಶನ್ ಕಾಣಿಸಿಕೊಂಡಿರುವ ಈ ಚಿತ್ರಕ್ಕೆ ಪ್ರಾರಂಭಿಕ ದಿನಗಳಲ್ಲಿ ಉತ್ತಮ ಕಲೆಕ್ಷನ್ ಸಿಕ್ಕರೂ, ಮಿಶ್ರ ಹಾಗೂ ನೆಗೆಟಿವ್ ವಿಮರ್ಶೆಗಳು ಚಿತ್ರದ ಗಳಿಕೆಗೆ ಹೊಡೆತ ನೀಡಿವೆ.
ಡಿಸೆಂಬರ್ 5ರಂದು ಬಿಡುಗಡೆಯಾದ ಈ ಚಿತ್ರ ಒಂದು ವಾರದಲ್ಲಿ ಸುಮಾರು 25 ಕೋಟಿ ರೂಪಾಯಿ ಗಳಿಸಿದೆ ಎಂದು sacnilk ವರದಿ ತಿಳಿಸಿದೆ. ಆದರೆ ಡಿಸೆಂಬರ್ 17ರಂದು ಕೇವಲ 80 ಲಕ್ಷ ರೂಪಾಯಿ ಮಾತ್ರ ಗಳಿಸಿರುವುದು ಗಮನ ಸೆಳೆದಿದೆ. ಇದಕ್ಕೂ ಮುನ್ನ ದಿನ ಚಿತ್ರ 1.05 ಕೋಟಿ ಕಲೆಕ್ಷನ್ ಮಾಡಿತ್ತು. ವಾರದ ದಿನಗಳಲ್ಲಿ ಪ್ರೇಕ್ಷಕರ ಸಂಖ್ಯೆ ಕಡಿಮೆಯಾಗುವ ಸಾಧ್ಯತೆ ಇದ್ದು, ಇಂದಿನ ಗಳಿಕೆಯೂ ಲಕ್ಷಗಳಲ್ಲೇ ಇರುವ ಸಾಧ್ಯತೆ ಇದೆ.
‘ಡೆವಿಲ್’ ಚಿತ್ರದ ಮುಂದಿನ ವಾರವೇ ಪ್ರಮುಖ ಪರೀಕ್ಷೆಯಾಗಲಿದೆ. ಸಿಂಗಲ್ ಸ್ಕ್ರೀನ್‌ಗಳಲ್ಲಿ ಮಾತ್ರ ಚಿತ್ರಕ್ಕೆ ಸ್ಪಂದನೆ ಸಿಗುತ್ತಿದ್ದರೆ, ಮಲ್ಟಿಪ್ಲೆಕ್ಸ್‌ಗಳಲ್ಲಿ ಆಸಕ್ತಿ ಕುಸಿದಿದೆ. ಡಿಸೆಂಬರ್ 25ರಂದು ‘ಮಾರ್ಕ್’ ಹಾಗೂ ‘45’ ಎಂಬ ಎರಡು ಸ್ಟಾರ್ ಸಿನಿಮಾಗಳು ಬಿಡುಗಡೆಯಾಗಲಿರುವುದರಿಂದ ಥಿಯೇಟರ್ ಲಭ್ಯತೆ ಕಡಿಮೆಯಾಗುವ ಆತಂಕ ಎದುರಾಗಿದೆ.
ದೊಡ್ಡ ಬಜೆಟ್‌ನಲ್ಲಿ ನಿರ್ಮಾಣವಾಗಿರುವ ‘ಡೆವಿಲ್’ ಚಿತ್ರ ಲಾಭದಾಯಕವಾಗಲು ಮುಂದಿನ ದಿನಗಳಲ್ಲಿ ಬಲವಾದ ವೀಕೆಂಡ್ ಕಲೆಕ್ಷನ್ ಅವಶ್ಯಕವಾಗಿದ್ದು, ಚಿತ್ರತಂಡದ ನಿರೀಕ್ಷೆ ಇದೀಗ ಅದ್ರ ಮೇಲೆಯೇ ನೆಟ್ಟಿದೆ.



