ಭಕ್ತರ ಏಳ್ಗೆಯೇ ಮಠಾಧೀಶರ ಉದ್ದೇಶ: ಶ್ರೀ ಮಲ್ಲಿಕಾರ್ಜುನ ಶಿವಾಚಾರ್ಯರು

0
Spread the love

ವಿಜಯಸಾಕ್ಷಿ ಸುದ್ದಿ, ನರೇಗಲ್ಲ: ಹಾನಗಲ್ಲ ಗುರು ಕುಮಾರೇಶ್ವರ ಮಹಾಸ್ವಾಮಿಗಳು ತಮಗಿಟ್ಟ ಹೆಸರಿನಂತೆ ಬದುಕಿದವರು ಎಂದು ನರೇಗಲ್ಲ ಹಿರೇಮಠದ ಶ್ರೀ ಮಲ್ಲಿಕಾರ್ಜುನ ಶಿವಾಚಾರ್ಯರು ಹೇಳಿದರು.

Advertisement

ಪಟ್ಟಣದ ಹಿರೇಮಠ ಜಾತ್ರಾಮಹೋತ್ಸವದ ೩ನೇ ದಿನದ ಕಾರ್ಯಕ್ರಮದಲ್ಲಿ ಅವರು ಆಶೀರ್ವಚನ ನೀಡಿದರು. ಅನಾಚಾರವಾಗಿದ್ದ ಸಮಾಜವನ್ನು ತಮ್ಮ ನಡೆ-ನುಡಿಗಳಿಂದ ತಿದ್ದಿದವರು ಕುಮಾರೇಶ್ವರರು. ಶಿವಸ್ವರೂಪಿಯಾದವನು ಎಂದಿಗೂ ಸದಾಚಾರವನ್ನು, ಶಿವಯೋಗವನ್ನು ಬಿಡಬಾರದು. ಭಕ್ತರ ಏಳ್ಗೆಯೇ ಮಠಾಧೀಶರ ಮೂಲ ಉದ್ದೇಶವಾಗಿದ್ದು, ಇದರ ಮಹತ್ವವನ್ನು ನಿಮಗೆ ತಿಳಿಸಿ, ನಿಮ್ಮನ್ನು ಶ್ರೀಮಠದ ಕಾರ್ಯಕ್ರಮಗಳಿಗೆ ಆಮಂತ್ರಿಲೆಂದೇ ನಾವು ಸದ್ಭಾವನಾ ಪಾದಯಾತ್ರೆಯನ್ನು ಹಮ್ಮಿಕೊಂಡಿದ್ದೇವೆ ಎಂದು ಶ್ರೀಗಳು ತಿಳಿಸಿದರು.

ಪುರಾಣಿಕರಾದ ಪಂ. ಅನ್ನದಾನಶಾಸ್ತಿçಗಳು ಮಾತನಾಡಿ, ಮಹಾತ್ಮರು ಅವತರಿಸಿ ಬರುವುದು ಲೋಕೋದ್ಧಾರಕ್ಕಾಗಿ. ಹಾನಗಲ್ಲ ಗುರು ಕುಮಾರೇಶ್ವರರು ವೀರಶೈವ ಲಿಂಗಾಯತ ಧರ್ಮವನ್ನು ಉದ್ಧಾರ ಮಾಡಿದ್ದಷ್ಟೇ ಅಲ್ಲದೆ ಇಡೀ ಸಮಾಜವನ್ನು ತಿದ್ದಿದ ಗುರುಗಳಾಗಿದ್ದಾರೆ. ಅವರು ಸಮಾಜೋದ್ಧಾರವನ್ನೇ ತಮ್ಮ ಜೀವನದ ಉಸಿರನ್ನಾಗಿಸಿಕೊಂಡರು ಎಂದು ಹೇಳಿದರು.

ಸಭೆಯನ್ನುದ್ದೇಶಿಸಿ ಗಣ್ಯ ವರ್ತಕ ಮಂಜುನಾಥ ಬೇಲೇರಿ ಮಾತನಾಡಿ, ಈ ಮಠದ ಪೂಜ್ಯರು ಏನೇ ಅಪ್ಪಣೆ ಮಾಡಿದರೂ ಆ ಸೇವೆಯನ್ನು ನಿರ್ವಹಿಸಲು ನಾನು ಸದಾ ಸಿದ್ಧ ಎಂದರು. ವೇದಿಕೆಯ ಮೇಲೆ ಗದಗ ಅಡವೀಂದ್ರ ಮಠದ ಧರ್ಮದರ್ಶಿಗಳು, ಎಸ್.ಎಸ್. ಮೇಟಿ, ಅಭಿಯಂತರ ಅರುಣ ಕುಮಾರ, ನರೇಗಲ್ಲ ಆರ್ಯವೈಶ್ಯ ಸಮಾಜದ ಅಧ್ಯಕ್ಷ ರಾಮಚಂದ್ರಪ್ಪ ನವಲಿ, ಉದ್ದಿಮೆದಾರ ಗೋವಿಂದರಾಜ ಗುಡಿಸಾಗರ ಮತ್ತಿತರರಿದ್ದರು.

ಸೋಮವಾರ ಶ್ರೀ ಕುಮಾರೇಶ್ವರರ ಜನನದ ನಿಮಿತ್ಯ ತೊಟ್ಟಿಕೋತ್ಸವ ಕಾರ್ಯಕ್ರಮವು ಸಡಗರ, ಸಂಭ್ರಮಗಳಿAದ ಜರುಗಿತು. ಸುಮಂಗಲೆಯರೆಲ್ಲರೂ ಶ್ರೀ ಕುಮಾರೇಶ್ವರರನ್ನು ತೊಟ್ಟಿಲಲ್ಲಿ ಹಾಕಿ ಜೋಗುಳ ಹಾಡಿ ಸಂಭ್ರಮಪಟ್ಟರು. ರುದ್ರಮುನಿ ಶಾಸ್ತ್ರಿಗಳು ತೊಟ್ಟಿಲೋತ್ಸವದ ಎಲ್ಲ ಧಾರ್ಮಿಕ ಕಾರ್ಯಗಳನ್ನು ನೆರವೇರಿಸಿದರು. ಶಿಕ್ಷಕ ವಿ.ವಿ. ಅಣ್ಣಿಗೇರಿ ನಿರೂಪಿಸಿದರೆ, ಈಶ್ವರ ಬೆಟಗೇರಿ ವಂದಿಸಿದರು.


Spread the love

LEAVE A REPLY

Please enter your comment!
Please enter your name here