ವಿಜಯಸಾಕ್ಷಿ ಸುದ್ದಿ, ಮುಳಗುಂದ: ಸಮ ಸಮಾಜ ನಿರ್ಮಾತೃ, ಸಮಾಜದ ಸುಧಾರಕ ಭಕ್ತ ಕನಕದಾಸರು ಎಂದು ಫಕ್ಕೀರಯ್ಯ ಅಮೋಘಿಮಠ ಹೇಳಿದರು.
Advertisement
ಅವರು ಪಟ್ಟಣದ ಪ.ಪಂ ಸಭಾಭವನದಲ್ಲಿ ಕನಕದಾಸರ 538ನೇ ಜಯಂತಿ ಉತ್ಸವದ ಅಂಗವಾಗಿ ಕನಕದಾಸರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿ, ಭಕ್ತ ಕನಕದಾಸರು ಎಲ್ಲರೂ ಒಂದೇ ಕುಲದವರು, ಎಲ್ಲರೂ ಸಮಾನರು ಎಂದು ಸಮಾಜದ ಸುಧಾರಣೆಯಲ್ಲಿ ಮಹತ್ವದ ಪಾತ್ರವಹಿಸಿದರು ಎಂದರು.
ಪ.ಪಂ ಮುಖ್ಯಾಧಿಕಾರಿ ಮಂಜುನಾಥ ಗುಳೇದ, ಪ.ಪಂ ಅಧ್ಯಕ್ಷೆ ಯಲ್ಲವ್ವ ಕವಲೂರ, ಉಪಾಧ್ಯಕ್ಷೆ ಅನುಸೂಯಾ ಸೋಮಗೇರಿ, ಪಾರವ್ವ ಅಳ್ಳಣ್ಣವರ, ನೀಲವ್ವ ಅಸುಂಡಿ, ಚಂಪಾವತಿ ಗುಳೇದ, ಕೆ.ಎಲ್. ಕರಿಗೌಡರ, ನಾಗರಾಜ ದೇಶಪಾಂಡೆ, ಬಸವರಾಜ ಸುಂಕಾಪೂರ, ಬಸವರಾಜ ಹಾರೋಗೇರಿ, ಎಂ.ಎನ್. ನಡಗೇರಿ, ಅಶೋಕ ಹುಣಶಿಮರದ, ವಾಣಿಶ್ರೀ ನಿರಂಜನ ಇದ್ದರು.


