HomeGadag Newsಕೃಷಿ ಜಮೀನುಗಳ ಸೀಮೆಗೆ ಹಾಲು ಎರೆದ ಭಕ್ತರು

ಕೃಷಿ ಜಮೀನುಗಳ ಸೀಮೆಗೆ ಹಾಲು ಎರೆದ ಭಕ್ತರು

For Dai;y Updates Join Our whatsapp Group

Spread the love

ವಿಜಯಸಾಕ್ಷಿ ಸುದ್ದಿ, ನರೇಗಲ್ಲ: ಸಮೀಪದ ಜಕ್ಕಲಿ ಗ್ರಾಮದ ಗ್ರಾಮ ದೇವತೆಗಳಾದ ದ್ಯಾಮಮ್ಮದೇವಿ-ದುರ್ಗಮ್ಮದೇವಿ ಜಾತ್ರಾ ಮಹೋತ್ಸವದ ಅಂಗವಾಗಿ ಶುಕ್ರವಾರ ಮೂರನೇ ದಿನದ ಕಾರ್ಯಕ್ರಮದಲ್ಲಿ ಗ್ರಾಮದ ಸುತ್ತಮುತ್ತಲಿನ ಕೃಷಿ ಜಮೀನುಗಳ ಸೀಮೆಗಳಲ್ಲಿ ಡೊಳ್ಳು ವಾದ್ಯ ವೈಭವದೊಂದಿಗೆ ಹಾಲನ್ನು ಎರೆಯಲಾಯಿತು.

ಮಾರನಬಸರಿ ದಾರಿಯಲ್ಲಿರುವ ದೇವತೆಮರದ ಸ್ಥಳದಲ್ಲಿ ಭೂತಾಯಿಗೆ ವಿಶೇಷ ಪೂಜೆ ಸಲ್ಲಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಪ್ರತಿ ಮೂರು ವರ್ಷಗಳಿಗೊಮ್ಮೆ ನಡೆಯುವ ಗ್ರಾಮದೇವತೆಗಳ ಜಾತ್ರಾ ಮಹೋತ್ಸವ ಸಂದರ್ಭದಲ್ಲಿ ಈ ಆಚರಣೆ ಹಿಂದಿನ ಸಂಪ್ರದಾಯದಂತೆ ನಡೆಯುತ್ತಾ ಬಂದಿದ್ದು, ನಮಗೆ ಉತ್ತಮವಾದ ಮಳೆ ಸುರಿಸಿ ಮುಂಗಾರಿ ಮತ್ತು ಹಿಂಗಾರಿ ಬೆಳೆಗಳು ಸಮೃದ್ಧವಾಗಿ ಬೆಳೆದು ರೈತರ ಬಾಳನ್ನು ಹಸನಾಗಿಸು ಎಂದು ದೇವತೆಗಳಿಗೆ ಹಾಗೂ ಭೂತಾಯಿ ಮಡಿಲಿಗೆ ನಮಸ್ಕರಿಸಿ ಹಾಲನ್ನು ಎರೆಯಲಾಗುತ್ತದೆ ಎಂದು ಯುವ ರೈತರಾದ ಉಮೇಶ ಮೇಟಿ ಹೇಳಿದರು.

ಈ ಸಂದರ್ಭದಲ್ಲ್ಲಿ ರೈತರಾದ ಎಮ್.ಎಮ್. ಮೇಟಿ, ಶೇಖರಪ್ಪ ಆದಿ, ಚೆನ್ನಬಸವ ಅರಹುಣಸಿ, ಅಂದಾನಗೌಡ ಪಾಟೀಲ, ಮುತ್ತಣ್ಣ ಅಸೂಟಿ, ಮುತ್ತಣ್ಣ ಪಾಟೀಲ, ಸಂತೋಷ ಮೇಟಿ, ಮಲ್ಲಿಕಾರ್ಜುನ ಮುಧೋಳ, ರಾಜಣ್ಣ ಮೇಟಿ, ಬಸವರಾಜ ಕುರಗೋಡಿ, ರಾಜೇಸಾಬ ಜಿಡ್ಡಿಮನಿ, ಬಸವರಾಜ ತೆಗ್ಗಿನಮನಿ, ಮಂಜುನಾಥ ಮುಗಳಿ, ಅಂದಪ್ಪ ರೋಣದ, ಯುವಕರಾದ ವಿಶ್ವ ಮುಕ್ಕಣ್ಣವರ, ಬಸವರಾಜ ಕಮ್ಮಾರ, ಮುತ್ತು ಗುಬ್ಬೇನಕೊಪ್ಪ ರುದ್ರಪ್ಪ ಜಂಗಣ್ಣವರ, ಕಿರಣ್ ಆರೇರ, ಶಿವು ಗುಬ್ಬೇನಕೊಪ್ಪ ಮುಂತಾದವರು ಪಾಲ್ಗೊಂಡು ಊರ ಸರಹದ್ದಿನ ಭೂತಾಯಿ ಮಡಿಲಲ್ಲಿ ಹಾಲನ್ನು ಎರೆದರು.


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!