ಶಬರಿಮಲೆ ಅಯ್ಯಪ್ಪನ ಸನ್ನಿಧಿಯಲ್ಲಿ ಭಕ್ತಸಾಗರ: 15 ದಿನದಲ್ಲೇ ಹುಂಡಿಗೆ 92 ಕೋಟಿ ರೂ.!

0
Spread the love

ತಿರುವನಂತಪುರಂ: ಶಬರಿಮಲೆ ಅಯ್ಯಪ್ಪನ ವಾರ್ಷಿಕ ಯಾತ್ರೆ ಶುರುವಾದ ಮೊದಲ 15 ದಿನಗಳಲ್ಲೇ ದೇಗುಲದ ಹುಂಡಿಗೆ 92 ಕೋಟಿ ರೂ. ಬಂದಿವೆ.

Advertisement

ದೇಗುಲದ ಆಡಳಿತ ಮಂಡಳಿಯ ಮಾಹಿತಿ ಪ್ರಕಾರ, ಕಳೆದ ವರ್ಷ ಇದೇ ಅವಧಿಯಲ್ಲಿ 69 ಕೋಟಿ ರೂ. ಬಂದಿತ್ತು. ಈ ಬಾರಿ 23 ಕೋಟಿ ರೂ. ಹೆಚ್ಚು ಆಗಿದೆ. ಒಟ್ಟಿನಲ್ಲಿ 33% ಹೆಚ್ಚಳ ಕಂಡುಬಂದಿದೆ.

ಈ ಬಾರಿ ಅರವಣ ಪ್ರಸಾದದ ಮಾರಾಟವೂ ಹೆಚ್ಚಾಗಿದೆ. ಕಳೆದ ವರ್ಷ 32 ಕೋಟಿ ರೂ. ಬಂದಿದ್ದರೆ, ಈ ವರ್ಷ 47 ಕೋಟಿ ರೂ. ಬಂದಿದೆ. ಯಾತ್ರೆ ಆರಂಭದಿಂದ ನವೆಂಬರ್ 30ರವರೆಗೆ ಸುಮಾರು 13 ಲಕ್ಷ ಯಾತ್ರಿಕರು ಶಬರಿಮಲೆಗೆ ಭೇಟಿ ನೀಡಿದ್ದಾರೆ ಎಂದು ಮಂಡಳಿ ತಿಳಿಸಿದೆ.


Spread the love

LEAVE A REPLY

Please enter your comment!
Please enter your name here