ವಿಜಯಸಾಕ್ಷಿ ಸುದ್ದಿ, ಡಂಬಳ: ಹೋಬಳಿಯ ಗ್ರಾಮಗಳಲ್ಲಿ ಶಿವರಾತ್ರಿ ನಿಮಿತ್ತ ದೇವಸ್ಥಾನಗಳಲ್ಲಿ ವಿಶೇಷ ಪೂಜೆ ಜರುಗಿತು. ಡಂಬಳ ಗ್ರಾಮದ ಜಗದ್ಗುರು ತೋಂಟದ ಮದರ್ಧನಾರೀಶ್ವರ ಮಠದಲ್ಲಿ, ಈಶ್ವರ ದೇವಸ್ಥಾನದಲ್ಲಿ, ನಕ್ಷತ್ರ ಆಕಾರದ ದೊಡ್ಡಬಸವೇಶ್ವರ(ಅಜ್ಜಮೇಶ್ವರ), ವಿರಭದ್ರೇಶ್ವರ, ಸೋಮೇಶ್ವರ, ಮೇವುಂಡಿ ಗ್ರಾಮದ ಶಿವನ ದೇವಾಲಯ, ಪೇಠಾ ಆಲೂರಿನ ಹಾಲೇಶ್ವರ ದೇವಾಸ್ಥಾನದಲ್ಲಿ ತ್ರಿವಿಧ ದಾಸೋಹಿ ಹಾಲೇಶ್ವರ ಶ್ರೀಗಳಿಂದ ವಿಶೇಷ ಪೂಜೆ ಜರುಗಿತು. ಹಬ್ಬದ ಪ್ರಯುಕ್ತ ಸಂಜೆ ವೇಳೆ ಮಹಿಳೆಯರು ವಿವಿಧ ದೇಗುಲಗಳಿಗೆ ತೆರಳಿ ಫಲಹಾರ, ನೈವೇದ್ಯ ಸಮರ್ಪಿಸಿದರು.
Advertisement
ಈಶ್ವರ ದೇಗುಲದಲ್ಲಿ ಶಿವರಾತ್ರಿ ಉಪವಾಸ ಹರಕೆ ಹೊತ್ತ ಭಕ್ತರು ಶಿವನಾಮ ಸ್ಮರಣೆ, ಭಜನೆ, ಶಿವನ ಸ್ತುತಿ, ಮಂತ್ರಗಳನ್ನು ಪಠಿಸಿ ಶಿವನನ್ನು ನೆನೆದು, ಭಕ್ತಿ ಸಮರ್ಪಿಸಿದರು.