ಬೆಂಗಳೂರು: ಧರ್ಮಸ್ಥಳದಲ್ಲಿ ಶವಗಳ ಪತ್ತೆ ಸಂಬಂಧ ಎಸ್ಐಟಿ ತನಿಖೆಗೆ ಕೋರಿರುವ ವಿಚಾರವಾಗಿ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಪ್ರತಿಕ್ರಿಯೇ ನೀಡಿದ್ದಾರೆ.
ನಗರದಲ್ಲಿ ಮಾತನಾಡಿದ ಅವರು, ಅಗತ್ಯತೆ ನೋಡಿಕೊಂಡು ತೀರ್ಮಾನ ಮಾಡ್ತೇವೆ. ಪ್ರಿಲಿಮಿನರಿ ಹಂತದಲ್ಲೇ ಎಸ್ಐಟಿ ಅಂದರೆ ಹೇಗೆ?. ಈಗ ತನಿಖೆ ನಡೆಯುತ್ತಿದೆ. ಸಿಎಂ ಜೊತೆಗೂ ನಾನು ಮಾತನಾಡಿದ್ದೇನೆ ಎಂದು ಹೇಳಿದರು.
ಶಾಸಕ ಬೈರತಿ ಬಸವರಾಜು ಮೇಲೆ ಆರೋಪ ವಿಚಾರವಾಗಿ ಮಾತನಾಡಿ, ಅವರಿಗೆ ನೋಟಿಸ್ ಕೊಟ್ಟಿದ್ದಾರೆ. ಅವರ ಹೇಳಿಕೆ ರೆಕಾರ್ಡ್ ಮಾಡ್ಕೋತಾರೆ. ನಂತರ ತನಿಖೆ ಮುಂದುವರೆಯುತ್ತೆ, ಇದರಲ್ಲಿ ಅವರ ಅನುಯಾಯಿಗಳ ಜೊತೆ ಸಂಪರ್ಕ ಇದ್ಯಾ ಇಲ್ವಾ. ಇದರ ಬಗ್ಗೆ ಪೊಲೀಸರು ಕ್ರಮ ಕೈಗೊಳ್ಳುತ್ತಾರೆ ಎಂದು ಹೇಳಿದರು.



