ವಿಜಯಸಾಕ್ಷಿ ಸುದ್ದಿ, ಗದಗ : ಇಲ್ಲಿನ ವೀರೇಶ್ವರ ಲೈಬ್ರರಿ ಹತ್ತಿರ ಸ್ಥಾಪಿಸಲಾಗಿರುವ ಹಿಂದೂ ಮಹಾಗಣಪತಿ ಸನ್ನಿಧಿಯಲ್ಲಿ ಧರ್ಮಸಭೆ, ನೃತ್ಯ ಸಂಗೀತ ವೈಭವ ಹಾಗೂ ಸನ್ಮಾನ ಸೇರಿದಂತೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.
ರಾಷ್ಟ್ರ ಪ್ರಶಸ್ತಿ ಪಡೆದ ಮಂಗಳೂರಿನ ಹೆಜ್ಜೆನಾದ ತಂಡದಿಂದ ನೃತ್ಯ ಮತ್ತು ಸಂಗೀತ ವೈಭವ ಕಾರ್ಯಕ್ರಮ ಜರುಗಿತು. ವಿಧಾನ ಪರಿಷತ್ ಸದಸ್ಯ ಎಸ್.ವ್ಹಿ. ಸಂಕನೂರು ಕಾರ್ಯಕ್ರಮವನ್ನು ಉದ್ಘಾಟಿಸಿದರು. ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರನ್ನು ಸನ್ಮಾನಿಸಲಾಯಿತು.
ಮಂಡಳಿಯ ಗೌರವಾಧ್ಯಕ್ಷರಾದ ಎಸ್.ಎಚ್. ಶಿವನಗೌಡರ್, ಅಧ್ಯಕ್ಷರಾದ ಸುಧೀರ ಕಾಟಿಗಾರ್, ಪ್ರಧಾನ ಕಾರ್ಯದರ್ಶಿ ರಾಘವೇಂದ್ರ ಹಬೀಬ, ಜಿಲ್ಲಾ ಬಿಜೆಪಿ ಅಧ್ಯಕ್ಷರಾದ ರಾಜು ಕುರುಡಗಿ, ಉಪಾಧ್ಯಕ್ಷರಾದ ಅಶ್ವಿನಿ ಜಗತಾಪ್, ವಂದನಾ ವರ್ಣಿಕರ್, ರವಿ ರಾಜ್ ಮಾಳಕೊಪ್ಪಮಠ, ಸಂತೋಷ್ ಮೇಲಗಿರಿ, ಸಾಗರ್ ಪವಾರ್, ಕಮಲೇಶ್ ಜರಿವಾಲಾ, ಜಗನ್ನಾಥಸಾ ಭಾಂಡಗೆ, ಪಕೀರಸಾ ಬಾಡಗೆ, ಸುರೇಶ್ ಮೇದಾರ್, ಉಮೇಶ್ ಹಡಪದ್ ಸೇರಿದಂತೆ ಅನೇಕ ಪದಾಧಿಕಾರಿಗಳು ಭಾಗವಹಿಸಿದ್ದರು.