ಬೆಂಗಳೂರು:- ಧರ್ಮಸ್ಥಳದಲ್ಲಿ ಶವಗಳ ಹೂತಿಟ್ಟ ಪ್ರಕರಣವನ್ನು SIT ತನಿಖೆಗೆ ವಹಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ಈ ಬಗ್ಗೆ ಗೃಹ ಸಚಿವ ಜಿ. ಪರಮೇಶ್ವರ್ ಪ್ರತಿಕ್ರಿಯೆ ನೀಡಿದ್ದು, ಧರ್ಮಸ್ಥಳದಲ್ಲಿ ಶವಗಳ ಹೂತಿಟ್ಟ ಪ್ರಕರಣವನ್ನು ಮಾತ್ರ ವಿಶೇಷ ತನಿಖಾ ತಂಡ ತನಿಖೆ ನಡೆಸುತ್ತದೆ. ಸೌಜನ್ಯ ಪ್ರಕರಣದ ತನಿಖೆ ಇಲ್ಲ. ಈ ವೇಳೆ, ಎಸ್‌ಐಟಿ ಅವರು ಕೆಲಸ ಪ್ರಾರಂಭ ಮಾಡ್ತಾರೆ. ಒತ್ತಡದ ಪ್ರಶ್ನೆ ಇಲ್ಲ. ಒತ್ತಡಕ್ಕೆ ಮಣಿದು ಮಾಡುವ ಕೆಲಸ ಅಲ್ಲ. ಅಲ್ಲಿನ ಸಾಧಕ ಬಾಧಕ ವಸ್ತು ಸ್ಥಿತಿ ನೋಡಿ ತೀರ್ಮಾನ ಮಾಡಬೇಕಾಗುತ್ತದೆ. ನಾವು ಪ್ರಾಥಮಿಕವಾಗಿ ತನಿಖೆ ಮಾಡಿ ಸ್ಟೇಷನ್ ಮಟ್ಟದಲ್ಲಿ ಅಂತ ಅವರಿಗೆ ಹೇಳಿದ್ದೆವು. ಜೊತೆಗೆ ಇನ್ನೂ ಹೆಚ್ಚಿನ ರೀತಿಯ ತನಿಖೆ ಆಗಬೇಕು ಎಂಬುದು ಹೆಚ್ಚಿನ ರೀತಿಯ ಅಭಿಪ್ರಾಯಗಳು ಸರ್ಕಾರ ಇದರಲ್ಲಿ ಮುಚ್ಚಿ ಇಡುವಂತದ್ದು ಏನೂ ಇಲ್ಲ ಎಂದಿದ್ದಾರೆ.
ಸ್ವಲ್ಪ ಯೋಚನೆ ಮಾಡಿ ನಾವು ತೀರ್ಮಾನ ಕೈಗೊಂಡಿದ್ದೇವೆ. ತನಿಖೆಯಲ್ಲಿ ಏನು ಬರುತ್ತದೆ ಅದನ್ನು ಕಾದು ನೋಡೋಣ. ಇದು ಸಣ್ಣ ವಿಚಾರ ಅಂತ ನಾವು ಪರಿಗಣಿಸಿಲ್ಲ ಸ್ಟೇಷನ್ ಮಟ್ಟದಲ್ಲಿ ಅವರು ಕಂಪ್ಲೆಂಟ್ ಕೊಟ್ಟಾಗ ಎಫ್‌ಐಆರ್ ಹಾಕಿ ಅವರು ತನಿಖೆ ಮಾಡ್ತಾರೆ. ಅದು ಹೆಚ್ಚು ಹೆಚ್ಚು ಬೆಳೆದಾಗ ತನಿಖೆ ತೀವ್ರತೆಯನ್ನು ಪಡೆಯುತ್ತೆ. ಹಾಗಾಗಿ ಉನ್ನತ ಮಟ್ಟದ ತನಿಖೆ ಮಾಡಬೇಕು ಎಂದು ಎಸ್‌ಐಟಿ ರಚನೆ ಮಾಡಿದ್ದೇವೆ ಎಂದಿದ್ದಾರೆ



