ಮಂಗಳೂರು: ಧರ್ಮಸ್ಥಳ ಬುರುಡೆ ಪ್ರಕರಣ ಪ್ರಮುಖ ಆರೋಪಿ ಚಿನ್ನಯ್ಯಗೆ ದಕ್ಷಿಣ ಕನ್ನಡ ಜಿಲ್ಲಾ ಸೆಷನ್ಸ್ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ. ಇದಕ್ಕೂ ಮುನ್ನ ಪ್ರಕರಣವನ್ನು ತನಿಖೆ ಮಾಡುತ್ತಿದ್ದ ಎಸ್‌ಐಟಿ ತಂಡ ಬೆಳ್ತಂಗಡಿ ಹೆಚ್ಚುವರಿ ನ್ಯಾಯಾಲಯದಲ್ಲಿ ಮಧ್ಯಂತರ ಚಾರ್ಜ್‌ಶೀಟ್ ಸಲ್ಲಿಸಿತ್ತು.
Advertisement
ಚಾರ್ಜ್‌ಶೀಟ್ ಸಲ್ಲಿಕೆಯ ನಂತರ ಚಿನ್ನಯ್ಯ ಪರ ವಕೀಲರು ಜಾಮೀನು ಅರ್ಜಿ ಸಲ್ಲಿಸಿದ್ದರು. ಜಿಲ್ಲಾ ನ್ಯಾಯಾಲಯವು ಅರ್ಜಿ ಪರಿಗಣಿಸಿ, ಷರತ್ತುಗಳು ಮತ್ತು ರೂ. 1 ಲಕ್ಷ ಬಾಂಡ್ ವಿಧಿಸುವ ಮೂಲಕ ಜಾಮೀನು ನೀಡಿದೆ. ಈ ಮೂಲಕ ಚಿನ್ನಯ್ಯಗೆ ಕಾನೂನುಬದ್ಧ ಶರತ್ತುಗಳನ್ನು ಪಾಲನೆಯೊಂದಿಗೆ ತಾತ್ಕಾಲಿಕ ರಿಲೀಫ್ ಸಿಕ್ಕಿದೆ.
ಚಿನ್ನಯ್ಯನಿಗೆ ಕೋರ್ಟ್ ಹಾಕಿರುವ ಷರತ್ತುಗಳು
- ಮುಂದೆ ಇದೇ ರೀತಿಯ ಅಪರಾಧಕ್ಕೆ ಕೈ ಹಾಕಬಾರದು
- ವಿಚಾರಣೆಯಿಂದ ತಪ್ಪಿಸಿಕೊಳ್ಳಲು ಓಡಿಹೋಗುವುದು, ಸ್ಥಳ ಬಿಟ್ಟು ಮರೆಮಾಡಿಕೊಳ್ಳುವುದು ಬೇಡ
- Prosecution witnesses ಮೇಲೆ ಯಾವುದೇ ರೀತಿಯಲ್ಲಿ ಪ್ರಭಾವ ಬೀರುವ ಕೆಲಸ ಮಾಡಬಾರದು
- ಕೇಸಿಗೆ ಸಂಬಂಧಿಸಿದ ದಾಖಲೆ ಅಥವಾ ಪುರಾವೆಗಳನ್ನು ಅಳಿಸುವುದು / ನಾಶಗೊಳಿಸುವುದು ಬೇಡ
- IO (Investigating Officer) ಕರೆ ಮಾಡಿದಾಗ ಹಾಜರಾಗಬೇಕು, ತನಿಖೆಗೆ ತೊಂದರೆ ಕೊಡಬಾರದು
- ಕೋರ್ಟ್ ದಿನಾಂಕಗಳಿಗೆ ತಪ್ಪದೇ ಹಾಜರಾಗಬೇಕು. ಕೋರ್ಟ್ ಮನ್ನಿಸಿದಾಗ ಮಾತ್ರ ಹಾಜರಾಗದೇ ಇರಬಹುದು
- ಚಿನ್ನಯ್ಯ ಹಾಗೂ ಜಾಮೀನಾದರೂ ಕೂಡ ಆಧಾರ್, ಮತದಾರರ ಗುರುತಿನ ಚೀಟಿಯ ಪುರಾವೆ ಕೊಡಬೇಕು
- ವಿಳಾಸದಲ್ಲಿ ಬದಲಾವಣೆ ಬಂದರೆ ಕೋರ್ಟ್‌ಗೆ ತಿಳಿಸಬೇಕು
- ಮೊಬೈಲ್ ನಂಬರ್ / ವಾಟ್ಸ್ಯಾಪ್ / ಇಮೇಲ್ ಮಾಹಿತಿ ಕೊಡಬೇಕು
- Court jurisdictionnನಿಂದ ಹೊರಗೆ ಹೋಗಬಾರದು
- ಕೇಸ್ ಬಗ್ಗೆ ಮಾಧ್ಯಮಕ್ಕೆ ಮಾತನಾಡಬಾರದು
- ಬೇಲ್ ಮೇಲೆ ಬಿಡುಗಡೆ ಆದ ನಂತರ ಬದಲಿ ದಿನಗಳಲ್ಲಿ (ದಿನ ಬಿಟ್ಟು ದಿನ) ಪೊಲೀಸ್ ಠಾಣೆಗೆ ಹಾಜರಾಗಬೇಕು


