Dharmasthala Case: ಎರಡೂವರೆ ಅಡಿ ತೋಡಿದರೂ ಪತ್ತೆಯಾಗದ ಮಾನವ ಅವಶೇಷಗಳು

0
Spread the love

ಮಂಗಳೂರು: ಧರ್ಮಸ್ಥಳದಲ್ಲಿ ಶವ ಹೂತಿಟ್ಟ ಆರೋಪಕ್ಕೆ ಸಾಕ್ಷಿ ಸಿಕ್ತಾ ಅನ್ನೋ ಪ್ರಶ್ನೆಗಳು ಹಬ್ಬಿವೆ. ಪಾಯಿಂಟ್-6ರಲ್ಲಿ ತನಿಖೆಗೆ ಟರ್ನಿಂಗ್​​​ ಪಾಯಿಂಟ್​​​ ಸಿಕ್ಕಿದ್ದು, ದೂರುದಾರ ಮಾರ್ಕ್​ ಮಾಡಿದ್ದ ಸ್ಥಳದಲ್ಲಿ ಮಾನವ ದೇಹದ ಮೂಳೆಗಳು ಸಿಕ್ಕಿವೆ. ಸದ್ಯ ಅವಶೇಷಗಳು ಸಿಕ್ಕ ಸ್ಥಳಕ್ಕೆ SIT ಹೆಚ್ಚಿನ ಭದ್ರತೆ ಕ್ರಮ ಕೈಗೊಂಡಿದ್ದು,

Advertisement

4 ದಿಕ್ಕಿನಲ್ಲಿ ಶೀಟ್ ಹಾಕಿ ಸಾಕ್ಷಿ ನಾಶ ಆಗದಂತೆ ಕಟ್ಟೆಚ್ಚರ ವಹಿಸಲಾಗಿದೆ. ಇನ್ನೂ ಇಂದು ನಡೆದ ಏಳನೇ ಗುಂಡಿ ಉತ್ಖನನ ಕಾರ್ಯದಲ್ಲಿ ಸದ್ಯ ಯಾವುದೇ ಕಳೇಬರ, ಅವಶೇಷಗಳು ಪತ್ತೆಯಾಗಿಲ್ಲ ಎಂಬ ಬಗ್ಗೆ ಮಾಹಿತಿ ಬಂದಿದೆ. ಸುಮಾರು ಎರಡೂವರೆ ಅಡಿ ಅಡಿಗಳ ತನಕ ಕಾರ್ಮಿಕರು ಅಗೆದರೂ ಯಾವುದೇ ವಸ್ತುಗಳು ಸಿಗಲಿಲ್ಲ,

ಹೀಗಾಗಿ ಹಿಟಾಚಿ ಮೂಲಕ ಅಗೆಯಲು ಪ್ರಾರಂಭಿಸಿದ್ದು, ಆರು ಅಡಿ ಆಳದವರೆಗೆ ಅಗೆದರೂ ಯಾವುದೇ ಅವಶೇಷಗಳು ಸಿಕ್ಕಿಲ್ಲ. ದೂರುದಾರನ ಸೂಚನೆಯಂತೆ ಸುತ್ತಮುತ್ತಲಿನ ಕೆಲವು ಮಣ್ಣನ್ನು ತೆಗೆಯಲಾಗುತ್ತಿದ್ದರೂ, ಏಳನೇ ಸ್ಪಾಟ್‌ನ ತನಿಖೆಯು ಯಾವುದೇ ಸಾಕ್ಷ್ಯವನ್ನು ಒದಗಿಸದೆ ಮುಕ್ತಾಯಗೊಂಡಿದೆ.


Spread the love

LEAVE A REPLY

Please enter your comment!
Please enter your name here